×
Ad

ಮಂಗಳೂರು: ಗಲ್ಫ್ ರಿಟಾಯರ್ಡ್ ಎಸೋಸಿಯೇಶನ್ ಸಭೆ

Update: 2023-06-24 17:09 IST

ಮಂಗಳೂರು: ಗಲ್ಫ್ ದೇಶಗಳಲ್ಲಿ ಹಲವು ವರ್ಷ ದುಡಿದು ಈಗ ಊರಿನಲ್ಲಿ ವಾಸವಾಗಿರುವವರ ಗಲ್ಫ್ ರಿಟಾಯರ್ಡ್ ಎಸೋಸಿಯೇಶನ್ ಮಂಗಳೂರು ಇದರ ಮೊದಲ ಸಭೆಯು ಶನಿವಾರ ಮಂಗಳೂರಿನ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಜರಗಿತು.

ಗಲ್ಫ್ ರಿಟಾಯರ್ಡ್ ಎಸೋಸಿಯೇಶನ್‌ನಿಂದ ಮುಂದೆ ಕೈಗೊಳ್ಳಲಾಗುವ ಕಾರ್ಯಕ್ರಮಗಳು ಮತ್ತು ಮಂಗಳೂರಿನಲ್ಲಿ ಕಚೇರಿ ಆರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸದಸ್ಯರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

ಸಮಿತಿಯ ನೂತನ ಅಧ್ಯಕ್ಷರಾಗಿ ಮಿತ್ತೂರು ಹಂಝ, ಉಪಾಧ್ಯಕ್ಷರಾಗಿ ಆದಂ ಬ್ಯಾರಿ, ಕಾರ್ಯದರ್ಶಿಯಾಗಿ ಅರಬಿ ಶೇಕ್ ಬಶೀರ್, ಜೊತೆ ಕಾರ್ಯದರ್ಶಿಯಾಗಿ ಎಂ.ಯೂಸುಫ್ ಮತ್ತು ಖಜಾಂಚಿಯಾಗಿ ಮೊಹಮ್ಮದ್ ಅನ್ವರ್ ಫಳ್ನೀರ್ ಇವರನ್ನು ಆರಿಸಲಾಯಿತು.

ನಿವೃತ್ತ ಸಹಾಯಕ ಸಂರಕ್ಷಣಾಧಿಕಾರಿ ಎಂ.ಬಿ.ಬೊಳ್ಳಾಯಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News