×
Ad

ಕೊಲ್ನಾಡು ದಾರುಲ್ ಫೌಝ್ ರಿಫಾರ್ಮ್ ಚಾರಿಟೇಬಲ್ ಟ್ರಸ್ಟ್ ನಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

Update: 2023-07-02 22:04 IST

ಮುಲ್ಕಿ: ಇಲ್ಲಿನ ದಾರುಲ್ ಫೌಝ್ ರಿಫಾರ್ಮ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ನೂತನ ಮನೆಯ ಕೀಲಿಕೈಯನ್ನು ಶಾಫಿ ಜುಮಾ ಮಸ್ಜಿದ್ ಕೊಲ್ನಾಡ್ ಜಮಾತಿಗೊಳಪೆಟ್ಟ ಮುಮ್ತಾಝ್ ಅವರಿಗೆ ಶುಕ್ರವಾರ ಹಸ್ತಾಂತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಶಂಶೀರ್ ಕಾರ್ಕಳ ಅವರು ಮನೆ ಕೀಲಿ ಕೈ ಹಸ್ತಾಂತರಿಸಿದರು. ಜಮಾಅತ್ ಖತೀಬ್‌ ಶರೀಫ್ ದಾರಿಮಿ ಹಲ್ ಹೈತಮಿ ದುವಾ ನೆರವೇರಿಸಿ ದಾರುಲ್ ಫೌಝ್ ರಿಫಾರ್ಮ್ ಚಾರಿಟೇಬಲ್ ಟ್ರಸ್ಟ್ ನ ಸಾಮಾಜಿಕ ಕಾಳಜಿಯ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು.

ಸಂಸ್ಥೆಯ ಸ್ಥಾಪಕರಾದ ಶಾಝ್ ಮುಲ್ಕಿ ಮಾತನಾಡಿ, ಬಡ ಕುಟುಂಬಕ್ಕೆ ಸಹಕರಿಸಿದ ಸರ್ವ ದಾನಿಗಳಿಗೆ ಡಿಎಫ್‌ಆರ್‌ ಸಂಸ್ಥೆಯ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಕಾರ್ಯ ನಿರ್ವಾಹಕ ಮುಸ್ತಾಫಾ ಬೋಳಿಯಾರ್ ಸಂಸ್ಥೆಯ ಸರ್ವ ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಹನೀಫ್, ಊರಿನ ಗಣ್ಯರಾದ ಅಹ್ಮದ್ ಬಾವ, ಆಸೀಫ್, ಮುಸ್ತಫಾ, ಅಡ್ವಕೇಟ್ ಝೀಶಾನ್ ಅಲಿ, ಜಲೀಲ್ ಕಲಾರ, ನಿಚ್ಚು ಮಂಗಳೂರು, ಶಹೀರ್, ಅನೀಸ್ ಕುಕ್ಕಾಜೆ, ಖಲೀಲ್ ಮುಡಿಪು ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News