×
Ad

ಹೆಜಮಾಡಿ: ಢಿಕ್ಕಿ ಹೊಡೆದ ಕಾರನ್ನು ಒಂದು ಕಿಲೋ ಮೀಟರ್ ಎಳೆದೊಯ್ದ ಟಿಪ್ಪರ್ !

Update: 2023-07-17 18:18 IST

ಹೆಜಮಾಡಿ: ಕಾರೊಂದು ಟಿಪ್ಪರ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದು ಸಿಲುಕಿಕೊಂಡ ಪರಿಣಾಮ ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಟಿಪ್ಪರ್ ಕಾರನ್ನು ಎಳೆದೊಯ್ದ ಘಟನೆ ಹೆಜಮಾಡಿಯ ಕನ್ನಂಗಾರು ಬೈಪಾಸ್ ಎದುರು ಸೋಮವಾರ ನಡೆದಿದೆ.

ಉಡುಪಿ ಕಡೆಯಿಂದ ಸಾಗುತ್ತಿದ್ದ ಕಾರು ಟಿಪ್ಪರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಟಿಪ್ಪರ್ ಹಿಂಭಾಗ ಸಿಲುಕಿಕೊಂಡಿದೆ. ಕಾರು ಸಿಲುಕಿಕೊಂಡಿದ್ದು, ಟಿಪ್ಪರ್ ಚಾಲಕನ ಗಮನಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.

ಹಿಂಬದಿಯಿಂದ ಬಂದ ಕಾರು ಚಾಲಕರೋರ್ವರು ಹೆಜಮಾಡಿ ಟೋಲ್ ಗೇಟ್ ಬಳಿ ಟಿಪ್ಪರನ್ನು ನಿಲ್ಲಿಸಿದ್ದಾರೆ. ಕಾರಿನಲ್ಲಿದ್ದ ಸಾಗರ ಮೂಲದ ಜಾಫರ್ ಖಾನ್, ಶಾಹಿನ, ಯಾಸಿರ್ ಖಾನ್ ಅವರನ್ನು ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರೂ ಸಾಗರದಿಂದ ಮಂಗಳೂರು ಆಸ್ಪತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕಾರು ಮತ್ತು ಟಿಪ್ಪರನ್ನು ವಶಕ್ಕೆ ಪಡೆದಿದ್ದಾರೆ.


Full View


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News