×
Ad

ಮಂಗಳೂರು: ಹೋಮ್ ನರ್ಸ್ ನಾಪತ್ತೆ

Update: 2023-07-09 20:58 IST

ಮಂಗಳೂರು, ಜು.9: ನಗರದ ಶಕ್ತಿನಗರ ಕಾರ್ಮಿಕ ಕಾಲನಿಯಲ್ಲಿ ವಾಸವಿದ್ದುಕೊಂಡು ಹಲವು ಕಡೆಗಳಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ಸೋಮಶೇಖರ್ ನಲವಾಗಳ (51) ಎಂಬವರು ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಹಾವೇರಿ ರಾಣೆಬೆನ್ನೂರು ಸಿದ್ದೇಶ್ವರ ನಗರದ ನಿವಾಸಿಯಾಗಿದ್ದ ಸೋಮಶೇಖರ ಕಳೆದ 5-6 ವರ್ಷಗಳಿಂದ ಪುತ್ತೂರು ಮತ್ತಿತರ ಕಡೆಗಳಲ್ಲಿ ಮನೆಯಲ್ಲಿರುವ ರೋಗಿಗಳ ಉಪಚರಿಸುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮನೆಯಿಂದ ಕೆಲಸಕ್ಕೆಂದು ಹೇಳಿ ಹೋದ ಇವರು ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುಮಾರು 5.5 ಅಡಿ ಎತ್ತರದ, ದುಂಡು ಮುಖದ, ಸಾಧಾರಣ ಮೈಕಟ್ಟು ಹೊಂದಿರುವ ಇವರ ಬಲಕೈಯಲ್ಲಿ ನಂದ ಟ್ಯಾಟೋ ಇದೆ. ಉದ್ದ ಗೆರೆಗಳಿರುವ ಕಪ್ಪು ಬಣ್ಣದ ಅರ್ಧ ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ, ಹಿಂದಿ ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಂಕನಾಡಿ ನಗರ ಠಾಣೆ (0824-2220529) ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News