×
Ad

ಉಡುಪಿ ರೈಲು ನಿಲ್ದಾಣದಲ್ಲಿ ವಿವಿಧ ಸೌಲಭ್ಯ ಉದ್ಘಾಟನೆ

Update: 2023-06-28 21:13 IST

ಉಡುಪಿ, ಜೂ.28: ಉಡುಪಿಯ ಕೊಂಕಣ ರೈಲು ನಿಲ್ದಾಣದ ಎರಡನೇ ಪ್ಲಾಟ್‌ಫಾರಂನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಪಿಸಲಾದ ವಿವಿಧ ಸೌಲಭ್ಯಗಳನ್ನು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಡಾ.ಜಯ ಗೌರಿ ಅವರು ಇಂದು ಉದ್ಘಾಟಿಸಿದರು.

ನವೀಕರಿಸಲಾದ ಪ್ರಯಾಣಿಕರ ನಿರೀಕ್ಷಣಾ ತಂಗುದಾಣ, ಹೊಸದಾಗಿ ಅಳವಡಿಸಲಾದ ವಾಟರ್ ಕೂಲರ್ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಅಳವಡಿಸಲಾದ ಸ್ಟೀಲ್ ಬೆಂಚ್‌ಗಳನ್ನು ಡಾ.ಗೌರಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೊಂಕಣ ರೈಲ್ವೆ ಮಂಗಳೂರಿನ ಸಹಾಯಕ ಟ್ರಾಫಿಕ್ ಮ್ಯಾನೇಜರ್ ಗೋವರ್ಧನಲಾಲ್ ಮೀನಾ, ರೋಟರಿ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ರೋಟರಿ ಕ್ಲಬ್ ಮಣಿಪಾಲ ಅಧ್ಯಕ್ಷೆ ರೇಣು ಜಯರಾಮ್, ನಾಗರಾಜ ಶೆಟ್ಟಿ, ಶಶಿಕಲಾ ರಾಜವರ್ಮ, ಕೊಂಕಣ ರೈಲ್ವೆ ಮಂಗಳೂರಿನ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News