×
Ad

ಇಂಡಿಯನ್ ಟ್ಯಾಲೆಂಟ್ ಒಲಿಂಪೈಡ್: ಬುರೂಜ್ ಶಾಲಾ ವಿದ್ಯಾರ್ಥಿನಿ ಆಯಿಷಾ ಮಲೀಹಾನಿಗೆ ರಾಜ್ಯ ಪ್ರಶಸ್ತಿ

Update: 2023-07-02 21:33 IST

ಬಂಟ್ವಾಳ : ರಝಾನಗರದ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಇಲ್ಲಿನ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಆಯಿಷಾ ಮಲೀಹಾ ಇಂಡಿಯನ್ ಟ್ಯಾಲೆಂಟ್ ಒಲಿಂಪೈಡ್ (indian talent olyimpaid) 2022-23ನೇ ಸಾಲಿನಲ್ಲಿ ನಡೆಸಿದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ.

ಐಟಿಒ ಸಂಸ್ಥೆ ನೀಡುವ ಸ್ಕಾಲರ್ ಶಿಪ್ ಗೂ ಭಾಜನರಾಗಿದ್ದು, ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಪಡೆದುಕೊಂಡು ಶಾಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿರುತ್ತಾಳೆ. ಈಕೆ ಇದೇ ಸಂಸ್ಥೆ ನಡೆಸಿದ ಡ್ರಾಯಿಂಗ್ ನಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾಳೆ.

ಪುಂಜಾಲಕಟ್ಟೆ ನಿವಾಸಿ ಮೊಹಮ್ಮದ್ ಹಾಗೂ ಫಾತಿಮಾ ಬಿ ಅವರ ಸುಪುತ್ರಿಯಾಗಿದ್ದು ಉತ್ತಮ ಕರಾಟೆ ಪಟುವಾಗಿದ್ದು ,ರಾಜ್ಯ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾಳೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News