×
Ad

ಉಡುಪಿ: ಆನ್ ಲೈನ್ ನಲ್ಲಿ ಉದ್ಯೋಗದ ಆಮಿಷ ಒಡ್ಡಿ ಯುವತಿಗೆ ಲಕ್ಷಾಂತರ ರೂ. ವಂಚನೆ

Update: 2023-06-29 22:59 IST

ಸಾಂದರ್ಭಿಕ ಚಿತ್ರ

ಉಡುಪಿ, ಜೂ.29: ಉದ್ಯೋಗಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಹುಡುಕುತಿದ್ದ ಯುವತಿಯೊಬ್ಬರು ವೆಬ್ಸೈ ಟ್ ಲಿಂಕ್ ನಲ್ಲಿ ಸಿಕ್ಕಿದ ಮೊಬೈಲ್ ನಲ್ಲಿ ಬಂದ ಸೂಚನೆಯಂತೆ ಲಕ್ಷಾಂತರ ರೂ.ಹಣವನ್ನು ಪಾವತಿಸಿ ವಂಚನೆಗೊಳಗಾದ ಘಟನೆ ವರದಿಯಾಗಿದೆ.

ಸಂಧ್ಯಾ ಎಸ್. ಎಂಬವರೇ ವಂಚನೆಗೊಳಗಾದ ಯುವತಿ. ಇವರು ಕೆಲಸಕ್ಕಾಗಿ ಹುಡುಕುತಿದ್ದಾಗ ಫೇಸ್ಬುಕ್ ನಲ್ಲಿ ಅಮೆಝಾನ್ ವರ್ಕ್ ಫ್ರಮ್ ಹೋಮ್ ಎಂಬ ವೆಬ್ಸೈಟ್  ಲಿಂಕ್ ಸಿಕ್ಕಿದ್ದ, ಅದರಲ್ಲಿದ್ದ ಮೊಬೈಲ್ಗೆ ಕರೆ ಮಾಡಿದಾಗ ನೀಡಿದ ಟಾಸ್ಕ್ ಅನ್ನು ನಂಬಿ ಗೂಗಲ್ಪೇ, ಪೇಟಿಎಂ ಮೂಲಕ ಒಟ್ಟು 2,88,991ರೂ. ಹಣವನ್ನು ಕಳುಹಿಸಿದ್ದರು.

ಆದರೆ ಆರೋಪಿಗಳು ಟಾಸ್ಕ್ ನಡೆಸಿದ ಬಳಿಕ ಹಣವನ್ನು ನೀಡದೇ, ತಾನು ವರ್ಗಾವಣೆ ಮಾಡಿದ ಹಣವನ್ನು ಸಹ ಮರಳಿಸದೇ ವಂಚಿಸಿರುವುದಾಗಿ ಸಂಧ್ಯಾ ಅವರು ನಗರದ ಸೆನ್ ಅಪರಾ‘ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News