×
Ad

ಕಿನ್ಯ: ಸಾಂತ್ವನ ತಂಡ ಅಸ್ತಿತ್ವಕ್ಕೆ

Update: 2023-07-09 17:23 IST

ಉಳ್ಳಾಲ: ಮಳೆಯಿಂದಾಗಿ ಉಂಟಾಗುವ ಪ್ರಕೃತಿ ದುರಂತ ಹಾಗೂ ಇನ್ನಿತರ ಅನಾಹುತಗಳ ಸಂಕಷ್ಟಕ್ಕೆ ಸಿಲುಕಿರುವವರ ಸಹಾಯಕ್ಕಾಗಿ ಮುಸ್ಲಿಮ್ ಜಮಾಅತ್ ಮತ್ತು ಎಸ್ ವೈಎಸ್ ಕಿನ್ಯ ಸರ್ಕಲ್ ವ್ಯಾಪ್ತಿಯ ಏಳು ಭಾಗಗಳಲ್ಲಿ "ಸದಾ ಸೇವೆಯ ಸಾಂತ್ವನ ತಂಡ" ವನ್ನು ರಚಿಸಲಾಯಿತು.

ಮುಸ್ಲಿಮ್ ಜಮಾಅತ್ ಕಿನ್ಯ ಸರ್ಕಲ್ ಅಧ್ಯಕ್ಷ ಹಾಜಿ ಬಿ.ಎಂ ಇಸ್ಮಾಈಲ್ ಪರಮಾಂಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅಮೀರರಾಗಿ ಕುರಿಯ ಉಸ್ಮಾನ್ ಝುಹ್ರಿ ಆಯ್ಕೆಯಾದರು. ಸೈಯದ್ ಅಲವಿ ತಂಙಳ್ ಮೀಂಪ್ರಿ ರವರ ದುಆಗೈದರು. ಮುಸ್ಲಿಮ್ ಜಮಾಅತ್ ದ.ಕ. ಜಿಲ್ಲಾ (ವೆಸ್ಟ್) ಕಾರ್ಯದರ್ಶಿ ಎಂಕೆಎಂ ಇಸ್ಮಾಈಲ್ ಮೀಂಪ್ರಿ ಉದ್ಘಾಟಿಸಿದರು.

ಏಳು ವಿವಿಧ ಭಾಗಗಳಿಗೆ ಪರಮಾಂಡ ಹಾಜಿ ಬಿ.ಎಂ.ಇಸ್ಮಾಈಲ್, ಎಂಕೆಎಂ ಇಸ್ಮಾಈಲ್, ಕೆ.ಎಂ.ಅಬ್ದುಲ್ ಖಾದರ್ (ಪದಿಯಾರೆ ಸೇಕಬ್ಬ), ಅಲಿಕುಂಞಿ ಬಾಕಿಮಾರ್, ಅಬ್ದುಲ್ ಅಝೀಝ್ ಸಾಗ್, ಅನ್ಸಾರ್ ಉಕ್ಕಡ, ಕೆ.ಎಚ್.ಮೂಸಕುಂಞಿ ಅವರು ಅಮೀರ್ ಆಗಿ ಆಯ್ಕೆಯಾದರು.

ಮುಸ್ಲಿಮ್ ಜಮಾಅತ್ ಕಿನ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಇಸ್ಮಾಈಲ್ ಸಾಗ್, ಎಸ್ ವೈಎಸ್ ಕಿನ್ಯ ಸರ್ಕಲ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಮೀಂಪ್ರಿ, ಮುಸ್ಲಿಮ್ ಜಮಾಅತ್ ಬೆಳರಿಂಗೆ ಅಧ್ಯಕ್ಷ ಅಬ್ಬಾಸ್ ಹಾಜಿ ಎಲಿಮಲೆ ಸಭೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News