×
Ad

ಮಂಗಳೂರು | KYC ಅಪ್ಡೇಟ್ ನೆಪದಲ್ಲಿ 44,500 ರೂ. ವಂಚನೆ: ಪ್ರಕರಣ ದಾಖಲು

Update: 2023-06-29 18:16 IST

ಮಂಗಳೂರು, ಜೂ.29: ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು, ಕೆವೈಸಿ ಅಪ್ಡೇಟ್ ಎಂಬ ನೆಪ ಹೇಳಿ ವ್ಯಕ್ತಿಯೊಬ್ಬರ ಖಾತೆಯಿಂದ 44,500ರೂ. ವಂಚನೆ ಮಾಡಿದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ ಜೂ.28ರಂದು 11.30ಕ್ಕೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು, ಕೆವೈಸಿ ಅಪ್‍ಡೇಟ್ ಮಾಡಬೇಕೆಂದು ಸಂದೇಶವಿದೆ ಎಂದಿದ್ದಾರೆ. ನಂತರ ಅಪರಿಚಿತ ವ್ಯಕ್ತಿ ಕರೆ ಮಾಡಿ ಫಿರ್ಯಾದಿದಾರರ ಬ್ಯಾಂಕ್ ವಿವರ ನೀಡುವಂತೆ ತಿಳಿಸಿದ್ದು, ಅದರಂತೆ ಕಸ್ಟಮರ್ ಐಡಿ, ಎಟಿಎಂ ಕಾರ್ಡ್ ವಿವರ ಮತ್ತು ಅಕೌಂಟï ವಿವರವನ್ನು ದೂರುದಾರರು ನೀಡಿದ್ದಾರೆ. ನಂತರ ಒಟಿಪಿಯನ್ನು ದೂರುದಾರರು ಹಂಚಿಕೊಂಡಿದ್ದು, ಕೆಲವೇ ಹೊತ್ತಿನಲ್ಲಿ ಬ್ಯಾಂಕ್ ಖಾತೆಯಿಂದ 44,500ರೂ. ಅನಧಿಕೃತವಾಗಿ ವರ್ಗಾವಣೆಯಾಗಿರುತ್ತದೆ ಎಂದು ದೂರುದಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News