×
Ad

ಮಂಗಳೂರು: ವಸತಿ ಸಂಕೀರ್ಣದಲ್ಲಿ ಬೆಂಕಿ ಆಕಸ್ಮಿಕ

Update: 2023-06-30 20:43 IST

ಮಂಗಳೂರು, ಜೂ.30: ನಗರದ ಬಾವುಟಗುಡ್ಡೆಯ ವಸತಿ ಸಂಕೀರ್ಣದಲ್ಲಿ ಶುಕ್ರವಾರ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

21 ಅಂತಸ್ತುಗಳ ಈ ವಸತಿ ಸಂಕೀರ್ಣದ ಲಿಫ್ಟ್‌ನ ಡೆಕ್ ವಯರಿಂಗ್ ಸ್ಥಳದಲ್ಲಿ ಸಂಜೆ ಸುಮಾರು 6:30ರ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು ಎನ್ನಲಾಗಿದೆ.

ದಟ್ಟ ಹೊಗೆಯಿಂದಾಗಿ ಕೆಲವರು ವಸತಿ ಸಂಕೀರ್ಣದಿಂದ ಹೊರಗೆ ಬಂದರು. ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗವು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಉಸಿರಾಟದ ಸಮಸ್ಯೆಯಿಂದ ಕೆಲವರು ಬಳಲಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News