×
Ad

ಮಂಗಳೂರು: ರೈಲಿನಲ್ಲಿ ದುಷ್ಕೃತ್ಯ; ಇಬ್ಬರ ಬಂಧನ

Update: 2023-07-01 20:43 IST

ಮಂಗಳೂರು,ಜು.1: ದಾದರ್-ತಿರುನಲ್ವೇಲಿ ರೈಲಿನಲ್ಲಿ ಶುಕ್ರವಾರ ನಡೆದ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ತಮಿಳುನಾಡಿನ ಜಯಪ್ರಭಾ (28) ಮತ್ತು ಪ್ರಸಾದ್ (23) ಎಂಬವರನ್ನು ಬಂಧಿಸಿದ್ದಾರೆ.

ಆರೋಪಿಗಳು ತೆಂಗಿನಕಾಯಿ ಕೀಳುವ ವೃತ್ತಿಯವರು. ತಮಿಳುನಾಡಿನಿಂದ ಗೋವಾಕ್ಕೆ ತೆರಳಿ ಅಲ್ಲಿ 2-3 ತಿಂಗಳ ಕಾಲ ತೆಂಗಿನಕಾಯಿ ಕೀಳುವ ಕೆಲಸ ಮುಗಿಸಿ ಮರಳಿ ಊರಿಗೆ ತೆರಳಲು ರೈಲು ಹತ್ತಿದ್ದು, ಇಬ್ಬರು ಕೂಡ ಕುಡಿದ ಮತ್ತಿನಲ್ಲಿದ್ದರು ಎನ್ನಲಾಗಿದೆ. ಹಾಗಾಗಿ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅವರ ಬಳಿ ತೆಂಗಿನಕಾಯಿ ಕೀಳಲು ಉಪಯೋಗಿಸುತ್ತಿದ್ದ ಕತ್ತಿಗಳು ಕೂಡ ಇದ್ದವು. ತೋಕೂರು ಬಳಿ ಬರುತ್ತಿದ್ದಂತೆಯೇ ದಾಂಧಲೆ ನಡೆಸಿ ಕತ್ತಿಯಿಂದ ರೈಲಿನ ಕಿಟಕಿಯ ಗಾಜು, ಸೀಟು ಸಹಿತ ರೈಲಿನ ಸೊತ್ತುಗಳಿಗೆ ಹಾನಿ ಮಾಡಿದರು.

ಇದನ್ನು ಕಂಡ ಪ್ರಯಾಣಿಕರು ಇದು ದರೋಡೆ ಕೃತ್ಯವೆಂದು ಆತಂಕಗೊಂಡು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಅದರಂತೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News