×
Ad

ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

Update: 2023-06-28 22:07 IST

ಮಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎಐಸಿಸಿಟಿಯು)ಯ ಕರೆಯಂತೆ ದ.ಕ ಜಿಲ್ಲಾ ಸಮಿತಿಯ ವತಿಯಿಂದ ಬುಧವಾರ ನಗರದ ಕ್ಲಾಕ್ ಟವರ್ ಬಳಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಎಐಸಿಸಿಟಿಯು ದ.ಕ. ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಮೋಹನ್ ಕೆ.ಇ, ಜಿಲ್ಲಾ ಮುಖಂಡರಾದ ರಾಜಾ ಚೆಂಡ್ತಿಮಾರ್, ಭರತ್ ಕುಮಾರ್, ಎಐಎಲ್‌ಎಜೆ ಮುಖಂಡರಾದ ನ್ಯಾಯವಾದಿ ತುಳಸೀದಾಸ್ ಆರ್. ಮಾತನಾಡಿದರು.

ಮುಖಂಡರಾದ ದಿನೇಶ್ ಆಚಾರಿ ಮಾಣಿ, ಇಬ್ರಾಹೀಂ ಮೈಂದಾಳ, ಮೊಹಿದಿನ್ ಕೆದುಮೂಲೆ, ಉಮೇಶ್ ವಾಮದಪದವು, ಲಿಯಾಕತ್ ಖಾನ್, ಸುಲೈಮಾನ್, ಕೃಷ್ಣಪ್ಪಪುದ್ದೊಟ್ಟು, ಅಝೀಝ್ ಉಪ್ಪಿನಂಗಡಿ, ಅಜಯ್ ಕುಮಾರ್ ಮಂಗಳೂರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News