×
Ad

ಮಂಗಳೂರು: ವ್ಯಕ್ತಿ ನಾಪತ್ತೆ

Update: 2023-07-12 21:53 IST

ಮಂಗಳೂರು, ಜು.12: ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಮದೇವ ಕಾಮತ್(52) ಎಂಬವರು ಜು.6ರಂದು ನಾಪತ್ತೆಯಾಗಿದ್ದಾರೆ. ಆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕೇರಳದಲ್ಲಿ ಮದುವೆ ಸಮಾರಂಭದ ಅಡುಗೆ ಕೆಲಸಕ್ಕೆಂದು ಹೋದವರು ಮರಳಿ ಬಂದಿಲ್ಲ. ಎಣ್ಣೆಕಪ್ಪು ಮೈಬಣ್ಣದ, ಸಪೂರ ಶರೀರದ, ಕೋಲು ಮುಖ ಹೊಂದಿರುವ ಇವರು ಕನ್ನಡ, ಕೊಂಕಣಿ, ಹಿಂದಿ, ತುಳು ಭಾಷೆಗಳನ್ನು ಮಾತನಾಡುತ್ತಾರೆ. ಕಪ್ಪು ಪ್ಯಾಂಟ್, ತಿಳಿ ಹಸಿರು ಬಣ್ಣದ ತುಂಬು ತೋಳಿನ ಜುಬ್ಬ ಧರಿಸಿದ್ದರು. ಕೈಯಲ್ಲಿ ಕಪ್ಪು ಬ್ಯಾಗ್ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News