×
Ad

ಮಣಿಪಾಲ: ಸತೀಶ್ ಚಪ್ಪರಿಕೆ ಕಾದಂಬರಿ ‘ಘಾಂದ್ರುಕ್’ ಬಿಡುಗಡೆ

Update: 2023-07-03 21:10 IST

ಮಣಿಪಾಲ : ಲೇಖಕ - ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ಕಾದಂಬರಿ ‘ಘಾಂದ್ರುಕ್’ ಅನ್ನು ಇತ್ತೀಚೆಗೆ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಡಿಸಿಪಿಎಎಸ್) ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

ಕನ್ನಡ ಸಾಹಿತ್ಯ ಲೋಕಕ್ಕೆ ವಿಭಿನ್ನ ಕೊಡುಗೆಯಾಗಿರುವ ಈ ಕಾದಂಬರಿಯು ಕಾರ್ಪೊರೇಟ್ ಜಗತ್ತು ಮತ್ತು ಭೌಗೋಳಿಕ ರಾಜಕೀಯ ಸನ್ನಿವೇಶ ದೊಂದಿಗೆ ಸಂವಾದಿಸುತ್ತದೆ ಎಂದು ಬರಹಗಾರ ರಾಜಾರಾಮ್ ತಲ್ಲೂರ್ ಕಾದಂಬರಿ ಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ತಿಳಿಸಿದರು.

ಕಾದಂಬರಿಯಲ್ಲಿ ಸಂಬಂಧಗಳ ಪರಿಶೋಧನೆಯೇ ಜೀವನದ ಅಂತಿಮ ಉದ್ದೇಶವಾಗಿದೆ ಎಂದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಹೇಳಿದರು. ಕಾದಂಬರಿಯಲ್ಲಿ ಪುರುಷ ಪಾತ್ರಕ್ಕಿಂತ ಮುಖ್ಯ ಸ್ತ್ರೀ ಪಾತ್ರವೇ ಪ್ರಬಲವಾಗಿದೆ ಎಂದು ಉಜಿರೆಯ ಎಸ್‌ಡಿಎಂ ಕಾಲೇಜಿನ ಪ್ರಾದ್ಯಾಪಕ ಮತ್ತು ವಿಮರ್ಶಕ ಪ್ರೊ.ರಾಜಶೇಖರ್ ಹೇಳಿದರು.

ಘಾಂದ್ರುಕ್ ಎಂಬ ನೇಪಾಳದ ಹಳ್ಳಿಯ ಹೆಸರು ಕಾದಂಬರಿಯಲ್ಲಿ ರೂಪಕವಾಗುತ್ತದೆ ಎಂದು ಎಂಐಸಿಯ ಪ್ರೊ.ಶ್ರೀರಾಜ್ ಗುಡಿ ಹೇಳಿದರು.

ಸತೀಶ್ ಚಪ್ಪರಿಕೆ ಅವರು ತಮ್ಮ ಪ್ರಯಾಣ ಮತ್ತು ಅವರ ಕಾದಂಬರಿ ಬರವಣಿಗೆಯ ಪ್ರಕ್ರಿಯೆಯನ್ನು ವಿವರಿಸುತ್ತಾ ಈ ಕಾದಂಬರಿ ನನ್ನ ಜಾಗೃತ ಆಲೋಚನೆಯನ್ನು ಮೀರಿದೆ ಎಂದು ನುಡಿದರು. ಚಪ್ಪರಿಕೆ ಅವರಿಗೆ ಆರಂಭಿಕ ವರ್ಷಗಳಲ್ಲಿ ಶಿಕ್ಷಕರಾಗಿದ್ದ ಜನಾರ್ದನ ಮರವಂತೆ ಮಾತನಾಡಿ ಅವರಿಂದ ಇನ್ನಷ್ಟು ಇಂತಹ ಕೆಲಸಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News