×
Ad

ಜು.2: ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಬೃಹತ್ ರಕ್ತದಾನ ಶಿಬಿರ

Update: 2023-06-30 18:24 IST

ಮಂಗಳೂರು : ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಜು.2ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆಯವರೆಗೆ ಬೃಹತ್ ರಕ್ತದಾನ ಶಿಬಿರವು ಎಂ.ಜೆ.ಎಂ. ಸಮುದಾಯ ಭವನ ಬಜ್ಪೆಯಲ್ಲಿ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಕ್ತದ ಕೊರತೆ ಎದ್ದು ಕಾಣುತ್ತಿರುವ ಕಾರಣ ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿ ಇದರ ವತಿಯಿಂದ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ದೇರಳಕಟ್ಟೆ ಇದರ ಸಹಯೋಗದೊಂದಿಗೆ “ಬೃಹತ್ ರಕ್ತದಾನ ಶಿಬಿರ” ಜುಲೈ 2 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆಯವರೆಗೆ  ಎಂ.ಜೆ.ಎಂ. ಸಮುದಾಯ ಭವನ ಬಜ್ಪೆಯಲ್ಲಿ ನಡೆಯಲಿರುವುದು. ಕಾರ್ಯಕ್ರಮಕ್ಕೆ ಎಲ್ಲಾ ನಾಗರಿಕರು ಬಂದು ರಕ್ತದಾನ ಮಾಡಬೇಕಾಗಿ ಮತ್ತು ಮಹಿಳೆಯರಿಗೆ ರಕ್ತದಾನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹುಸೈನ್‌ ಸಿರಾಜ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News