×
Ad

ಮಂಗಳೂರು: ಚಿನ್ನದ ಸರ, ಮೊಬೈಲ್ ಸುಲಿಗೆ ಪ್ರಕರಣ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿ ಸೆರೆ

Update: 2023-06-17 23:23 IST

ಮಂಗಳೂರು: ಬೈಕಂಪಾಡಿ ರೈಲ್ವೇ ಟ್ರ್ಯಾಕ್ ಬಳಿ ಶುಕ್ರವಾರ ನಡೆದಿದ್ದ ಚಿನ್ನದ ಸರ ಮತ್ತು ಮೊಬೈಲ್ ಸುಲಿಗೆ ಮಾಡಿದ್ದ ಆರೋಪಿಗಳ ಪೈಕಿ ಸ್ಯಾಂಡ್ ಪಿಟ್ ಬೆಂಗ್ರೆಯ ನಿಹಾಲ್ ವೈ ಸುವರ್ಣ (19) ಎಂಬಾತನನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ನಿರೀಕ್ಷಕ ಸೋಮಶೇಖರ್ ನೇತೃತ್ವದ ಪೊಲೀಸರ ತಂಡ ಬಂಧಿತ ಆರೋಪಿ ನಿಹಾಲ್‌ನಿಂದ 25,000 ರೂ. ಮೌಲ್ಯದ ಚಿನ್ನದ ಸರ ಹಾಗೂ 6,000ರೂ. ನಗದು ಸೇರಿದಂತೆ ಒಟ್ಟು 45,000 ರೂ.ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಬೈಕಂಪಾಡಿ ಹತ್ತಿರದ ರೈಲ್ವೆ ಟ್ರ್ಯಾಕ್ ಬಳಿಕ ಬಾಲಕನ ಕಣ್ಣಿಗೆ ಮೆಣಸಿನ ಹುಡಿ ಎರಚಿ ಅವನ ಮೊಬೈಲ್ ಮತ್ತು ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಘಟನೆ ನಡೆದ ಆರು ಘಂಟೆಗಳ ಒಳಗಾಗಿ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News