×
Ad

ಮೂಡುಬೆಳ್ಳೆ: ಹ್ಯುಮಾನಿಟಿ ವನ ಯೋಜನೆಗೆ ಚಾಲನೆ

Update: 2023-07-16 19:47 IST

ಶಿರ್ವ, ಜು.16: ಬೆಳ್ಮಣ್ ಹ್ಯುಮಾನಿಟಿ ಟ್ರಸ್ಟ್ ವತಿಯಿಂದ ಮೂಡುಬೆಳ್ಳೆ ಕಟ್ಟಿಂಗೇರಿಯಲ್ಲಿ ಎಝೇಕಿಲ್ ಡಿಸೋಜ ಅವರು ದಿ.ಅಂತೋನಿ ಸಬೀನಾ ಸಿಕ್ವೇರಾರವರ ಸ್ಮರಣಾರ್ಥ ಟ್ರಸ್ಟ್‌ಗೆ ನೀಡಿದ 71 ಸೆಂಟ್ಸ್ ಜಾಗದಲ್ಲಿ ಹ್ಯುಮಾನಿಟಿ ವನ ನಿರ್ಮಾಣ ಯೋಜನೆಗೆ ಶನಿವಾರ ಚಾಲನೆ ನೀಡಲಾಯಿತು.

ಮೂಡುಬೆಳ್ಳೆ ನಾಲ್ಕುಬೀದಿ ಸನ್‌ಶೈನ್ ಅಡಿಟೋರಿಯಮ್‌ನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಉಡುಪಿ ತಾಪಂ ಮಾಜಿ ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ನಾಮಫಲಕ ಅನಾವರಣ ಮಾಡುವ ಮೂಲಕ ವನ ನಿರ್ಮಾಣಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳದಾನಿ ಎಝೇಕಿಲ್ ಡಿಸೋಜ ಅವರನ್ನು ಹ್ಯುಮಾನಿಟಿ ವಿಶ್ವಸ್ಥ ನವೀನ್ ಶೆಣೈ ಸನ್ಮಾನಿಸಿದರು. ವನ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಜೀತ್ ಮಿಲನ್ ರೋಚ್ ಮಾತನಾಡಿ ಹ್ಯುಮಾನಿಟಿ ವನದ ಮಹತ್ವ ಮತುತಿ ಅನಿವಾರ್ಯತೆಯ ಬಗ್ಗೆ ಮಾಹಿತಿ ನೀಡಿದರು.

ಮಹಿಮಾ ಭಂಡಾರಿ ಪರಿಸರಗೀತೆ ಹಾಡಿದರು. ದೀಪಕ್ ಕಾಮತ್, ಲಾಯ್ಡ್ ರೇಗೋ ಪರಿಚಯಿಸಿದರು. ವಿತೋರಿ ಕಾರ್ಕಳ್ ಕಾರ್ಯಕ್ರಮ ನಿರೂಪಿಸಿದರು. ರೋಶನ್ ಬೆಳ್ಮಣ್ ವಂದಿಸಿದರು. ನಂತರ ಕಟ್ಟಿಂಗೇರಿ ಹ್ಯುಮಾನಿಟಿ ವನದಲ್ಲಿ ಗಿಡಗಳನ್ನು ನಡೆಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News