ಸಹೋದರರಿಂದಲೇ ಅಣ್ಣನ ಕೊಲೆ ಪ್ರಕರಣ: ಕೇರಳದಲ್ಲಿ ಆರೋಪಿಗಳ ಬಂಧನ
Update: 2023-07-16 18:55 IST
ಉಸ್ಮಾನ್
ಸುಳ್ಯ: ಆಸ್ತಿ ವಿವಾದಕ್ಕೆ ಸಂಬಂಧಿಸಿ ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಸಹೋದರರಿಂದ ಕೊಲೆಯಾದ ಉಸ್ಮಾನ್ ಅವರ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿಗಳನ್ನು ಕೇರಳದಲ್ಲಿ ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.
ಉಸ್ಮಾನ್‍ರ ಸಹೋದರರಾದ ರಫೀಕ್ ಮತ್ತು ಸತ್ತಾರ್ ಆಸ್ತಿ ವಿವಾದಕ್ಕೆ ಸಂಬಂಧಿಸಿ ಅಣ್ಣ ಉಸ್ಮಾನ್‍ರನ್ನು ಚೂರಿಯಿಂದ ಇರಿದು ಜು. 14ರಂದು ಕೊಲೆ ಮಾಡಿದ್ದರು. ಬಳಿಕ ಅವರು ರಿಕ್ಷಾದಲ್ಲಿ ಅರಂತೋಡುವರೆಗೆ ಬಂದು ಮತ್ತೊಂದು ರಿಕ್ಷಾದಲ್ಲಿ ಸುಳ್ಯಕ್ಕೆ ಬಂದು ಕೇರಳ ಕಡೆಗೆ ಪರಾರಿಯಾಗಿದ್ದರು.
ಆರೋಪಿಗಳನ್ನು ಕೊಡಗು ಪೊಲೀಸರು ಶನಿವಾರ ರಾತ್ರಿ ಕೇರಳದಲ್ಲಿ ಬಂಧಿಸಿದ್ದಾರೆ.