×
Ad

ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ: ಉಡುಪಿ ವಿಬಿಸಿಎಲ್‌ಗೆ ಸಮಗ್ರ ಪ್ರಶಸ್ತಿ

Update: 2023-07-12 19:03 IST

ಉಡುಪಿ, ಜು.೧೨: ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಮರಿಯಾ ತೆರೇಸಾ, ವಿದ್ಯಾ ವಸಂತ ಕುಮಾರ್ ಮತ್ತು ಪಾರ್ವತಿ ಇವರನ್ನೊಳಗೊಂಡ ತಂಡ, ಬೆಂಗಳೂರಿನ ಬಿಷಪ್ ಕಾಟನ್ ಕಾನೂನು ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಇದರ ಜೊತೆಗೆ ಈ ಸ್ಪರ್ಧೆಯಲ್ಲಿ ವಿಬಿಸಿಎಲ್ ತಂಡದ ಮರಿಯಾ ತೆರೇಸಾ ಅವರು ‘ಅತ್ಯುತ್ತಮ ವಕೀಲೆ’ ಆಗಿ ಆಯ್ಕೆಯಾಗಿದ್ದು, ವೈಯಕ್ತಿಕ ಪ್ರಶಸ್ತಿಯನ್ನೂ ಗೆದ್ದುಕೊಂಡರು. ಅಲ್ಲದೇ ಅತ್ಯುತ್ತಮ ಮೆಮೋರಿಯಲ್ ಪ್ರಶಸ್ತಿಯನ್ನು ಉಡುಪಿಯ ವಿಬಿಸಿಎಲ್ ತಂಡ ಪಡೆದಿದೆ.

ರಾಷ್ಟ್ರೀಯ ಪ್ರಶಸ್ತಿ ಜಯಿಸಿರುವ ವಿಬಿಸಿಎಲ್ ಯುವ ತಂಡದ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಘುನಾಥ್ ಕೆ.ಎಸ್ ಹಾಗೂ ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News