×
Ad

ಟೋಲ್ ಸಂಗ್ರಹ ಸ್ಥಗಿತದಿಂದ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ: ಸಚಿವ ಮಾಂಕಾಳ್ ವೈದ್ಯ

Update: 2023-07-10 00:00 IST

ಭಟ್ಕಳ: ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ರಾ.ಹೆ. ಕಾಮಗಾರಿಯಿಂದ ಅಸಂತುಷ್ಟರಾಗಿರುವ ಸಚಿವ ಮಾಂಕಾಳ್ ವೈದ್ಯ ಇತ್ತಿಚಿಗೆ ಭಟ್ಕಳದಲ್ಲಿ ಹೆದ್ದಾರಿ ಸೃಷ್ಟಿಸಿದ ಸಮಸ್ಯೆಯಿಂದಾಗಿ ಆಕ್ರೋಶಗೊಂಡಿದ್ದು ಕುಮಟಾ ಹಾಗೂ ಶಿರೂರು ಟೋಲ್ ಪ್ಲಾಝಾದಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು.

ಆದರೆ ಜಿಲ್ಲಾಧಿಕಾರಿಗಳು ಕಾರವಾರದಲ್ಲಿ ರವಿವಾರದಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಟೋಲ್ ಪ್ಲಾಝಾದಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಳಿಸುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂಬ ಹೇಳಿಕೆ ನೀಡಿದ್ದಾಗಿ ವರದಿಯಾಗಿದೆ. ಈ ಕುರಿತಂತೆ ಭಟ್ಕಳದಲ್ಲಿ ಸಚಿವ ಮಾಂಕಾಳ್ ವೈದ್ಯರು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ಆಗುತ್ತದೆ. ನನ್ನ ಮಾತಿನಲ್ಲಿ ಯಾವುದೇ ವ್ಯತ್ಯಾಸ ಇಲ್ಲವೆ ಇಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News