×
Ad

ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭೆ ವತಿಯಿಂದ ಸ್ಪೀಕರ್ ಖಾದರ್, ಶಾಸಕರಿಗೆ ಅಭಿನಂದನೆ

Update: 2023-07-09 19:12 IST

ಮಂಗಳೂರು, ಜು ೮: ಮೊಗವೀರರು ಶ್ರಮಜೀವಿಗಳಾಗಿದ್ದು ಸ್ವಾಭಿಮಾನಿಗಳಾಗಿದ್ದಾರೆ. ಅವರ ಬೇಡಿಕೆಗಳ ಈಡೇರಿಕೆಗೆ ಶ್ರಮಿಸುವುದಾಗಿ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭೆ ವತಿಯಿಂದ ಪಣಂಬೂರು ಮೊಗವೀರ ಸಭಾದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು ಟಿ ಖಾದರ್ , ಶಾಸಕರುಗಳಾದ ಡಾ. ವೈ ಭರತ್ ಶೆಟ್ಟಿ, ಡಿ. ವೇದವ್ಯಾಸ ಕಾಮತ್, ಯಶಪಾಲ್ ಎ ಸುವರ್ಣರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಯುಕ್ತ ಸಭೆಯ ಅಧ್ಯಕ್ಷ ಭರತ್ ಕುಮಾರ್ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಸಮಾಜದ ಪರವಾಗಿ 30 ಅಂಶಗಳ ಹಕ್ಕೊತ್ತಾಯದ ಮನವಿಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.

ಮೊಗವೀರ ಮಹಾಜನ ಸಂಘದ ಅಧ್ತಕ್ಷ ಜಯ ಸಿ ಕೋಟ್ಯಾನ್ ಅಭಿನಂದನಾ ನುಡಿಗಳನ್ನಾಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೋಹನ್ ಕೋಡಿಕಲ್ ವಂದಿಸಿದರು. ಯಶವಂತ ಬೋಳೂರು ಕಾರ್ಯಕ್ರಮ ನಿರ್ವಹಿಸಿದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News