×
Ad

ಬಕ್ರೀದ್ ಹಬ್ಬದ ಹಿನ್ನೆಲೆ: ಸುರತ್ಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪಥಸಂಚನ

Update: 2023-06-23 22:53 IST

ಸುರತ್ಕಲ್‌, ಜೂ.23: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸುರತ್ಕಲ್‌ ಪೊಲೀಸರು ಮತ್ತು ಕ್ರಿಪ್ರ ಕಾರ್ಯಾಚರಣೆ ಪಡೆಯ ಜವಾನರು ಶುಕ್ರವಾರ ಪಥಸಂಚನ ನಡೆಸಿದ ಸೌಹಾರ್ದದ ಸಂದೇಶ ಸಾರಿದರು.

ಸುರತ್ಕಲ್‌ ಪೇಟೆಯಿಂದ ಆರಂಭಿಸಲಾದ ಪಥಸಂಚಲನವು ಚೊಕ್ಕಬೆಟ್ಟು, ಕೃಷ್ಣಾಪುರ, ಕಾಟಪಳ್ಳವಾಗಿ ಸಾಗಿ ಗಣೇಶ್‌ಪುರದಲ್ಲಿ ಸಮಾರೋಪಗೊಂಡಿತು.

ಈ ಸಂದರ್ಭ ಸುರತ್ಕಲ್‌ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷರಾದ ಮಹೇಶ್‌ ಪ್ರಸಾದ್‌ ಅವರು ಮುಖ್ಯಪ್ರದೇಶಗಳಲ್ಲಿ ಊರಿನ ಪ್ರಮುಖರನ್ನು ಭೇಟಿಯಾಗಿ ಚರ್ಚಿಸಿದರು. ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಗೆ ಅಂಟಿರುವ ಕೋಮು ಸೂಕ್ಷ್ಮ ಪ್ರೇದೇಶ ಎಂಬ ಹಣೆ ಪಟ್ಟಿಯನ್ನು ಕಳೆಯಲು ಎಲ್ಲರೂ ಸೌಹಾರ್ದ ಯುತ ವಾತಾವರಣ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡರು.






Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News