×
Ad

ಬ್ರಹ್ಮಾವರ ಬಳಿಯ ಕೂರಾಡಿಯಲ್ಲಿ ಪಟ್ಟಾಭಿರಾಮ ಸೋಮಯಾಜಿ‌ ಅಂತ್ಯಕ್ರಿಯೆ

Update: 2023-07-02 19:28 IST

ಉಡುಪಿ: ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ಮಂಗಳೂರಿನಲ್ಲಿ ನಿಧನರಾಗಿದ್ದ ವಿಶ್ರಾಂತ ಪ್ರಾಧ್ಯಾಪಕ, ಚಿಂತಕ, ಸಾಹಿತ್ಯ ವಿಮರ್ಶಕ, ಮಾನವತಾವಾದಿ ಪಟ್ಟಾಭಿರಾಮ ಸೋಮಯಾಜಿಯವರ ಅಂತ್ಯಕ್ರಿಯೆಯು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಕೂರಾಡಿಯಲ್ಲಿ ನಡೆಯಿತು.

ಪಟ್ಟಾಭಿರಾಮ ಸೋಮಯಾಜಿಯವರ ಅಕ್ಕ ಅನಸೂಯ ಕಲ್ಕೂರ ಅವರ ಮನೆಯ‌ ವಠಾರದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಟ್ಟಾಭಿಯವರ ಗೆಳೆಯರು, ಒಡನಾಡಿಗಳಾದ ಪ್ರೊ. ಕೆ. ಪಣಿರಾಜ್, ಕೆ.ಎಲ್. ಅಶೋಕ್, ಉಮರ್ ಯು.ಹೆಚ್., ಕಲ್ಕುಳಿ ವಿಠಲ ಹೆಗಡೆ, ರಾಘವೇಂದ್ರ ಚಾರ್ವಾಕ, ಇದ್ರೀಸ್ ಹೂಡೆ, ಹುಸೈನ್ ಕೋಡಿಬೆಂಗ್ರೆ, ಇರ್ಶಾದುಲ್ಲಾಹ್ ಆದಿಲ್, ಡಾ. ಹಯವದನ ಉಪಾಧ್ಯಾಯ, ಶಾಮರಾಜ್ ಬಿರ್ತಿ, ಶಾರದಾ ಮೂಡುಸಗ್ರಿ, ಜಿ. ವಿಷ್ಣು, ಹಸೀನಾ ಬಾನು, ಶಿವಕುಮಾರ್ ಗುಳಘಟ್ಟ, ಬಾಬು ರಾಜ್, ವಿನ್ಸೆಂಟ್ ಆಳ್ವ, ವಿಕ್ಟರ್ ವಾಝ್, ಲಕ್ಷ್ಮಣ್ ಮತ್ತಿತರರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.

ಪಟ್ಟಾಭಿರಾಮ ಸೋಮಯಾಜಿ ಅಕ್ಕ ಅನಸೂಯ ಕಲ್ಕೂರ, ಅಕ್ಕಳ ಮಗ ಅಂಬರೀಷ್ ಕಲ್ಕೂರ, ಅಣ್ಣ ರಂಗನಾಥ್ ಸೋಮಯಾಜಿ, ಅತ್ತೆ ನಿವೇದಿತಾ ಹಾಗೂ ಕುಟುಂಬದ ಸದಸ್ಯರು ಮತ್ತು ನೆರೆಮನೆಯವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News