×
Ad

ಉಡುಪಿ ಧರ್ಮಪ್ರಾಂತದ ನೂತನ ಮುಖ್ಯ ನ್ಯಾಯಾಧಿಪತಿಯಾಗಿ ವಂ.ರೋಶನ್ ಡಿ’ಸೋಜ

Update: 2023-06-30 18:48 IST

ಉಡುಪಿ, ಜೂ.೩೦: ಅತಿ ವಂ. ಡಾ.ರೋಶನ್ ಡಿ’ಸೋಜಾ ಅವರನ್ನು ಉಡುಪಿ ಧರ್ಮಪ್ರಾಂತ ನ್ಯಾಯಾಲಯದ ಮುಖ್ಯ ನ್ಯಾಯಾಧಿಪತಿಯಾಗಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ನೇಮಕಗೊಳಿಸಿದ್ದಾರೆ. ಜೂ.೩೦ ರಂದು ಉಡುಪಿ ಬಿಷಪ್ ಹೌಸ್‌ನಲ್ಲಿ ನಡೆದ ಸರಳ ಧಾರ್ಮಿಕ ಸಮಾರಂಭ ದಲ್ಲಿ ಬಿಷಪ್ ಜೆರಾಲ್ಡ್ ಲೋಬೊರ ಸಮ್ಮುಖದಲ್ಲಿ ವಂ.ಡಾ.ರೋಶನ್ ಡಿ’ಸೋಜಾ ಅಧಿಕಾರ ಸ್ವೀಕರಿಸಿದರು.

ನಿಕಟಪೂರ್ವ ನ್ಯಾಯಾಧಿಪತಿ ಅತಿ ವಂ. ವಾಲ್ಟರ್ ಡಿ’ಮೆಲ್ಲೊ ಅವರು ವಂ.ಡಾ.ರೋಶನ್ ಡಿ’ಸೋಜಾರಿಗೆ ಅಧಿಕಾರ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಬಿಷಪ್ ಜೆರಾಲ್ಡ್ ಲೋಬೊ, ಅತಿ ವಂ. ವಾಲ್ಟರ್ ಡಿ’ಮೆಲ್ಲೊ ಕಳೆದ ೬ ವರ್ಷಗಳಿಂದ ಉಡುಪಿ ಧರ್ಮಪ್ರಾಂತದಲ್ಲಿ ಸಲ್ಲಿಸಿದ ಸೇವೆಗಾಗಿ ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ನೂತನ ಮುಖ್ಯ ನ್ಯಾಯಾಧಿಪತಿ ವಂ. ಡಾ. ರೋಶನ್ ಡಿ’ಸೋಜಾರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಪಾಂಬೂರ್ ಚರ್ಚ್‌ನ ಧರ್ಮಗುರು ವಂ. ಹೆನ್ರಿ ಮಸ್ಕರೇನಸ್, ಉಡುಪಿ ಚರ್ಚ್‌ನ ಧರ್ಮಗುರು ಅತಿ ವಂ. ಚಾರ್ಲ್ಸ್ ಮಿನೇಜಸ್, ವಂ. ಜೋಕಿಮ್ ಡಿ’ಸೋಜ, ಧರ್ಮಪ್ರಾಂತದ ಖಜಾಂಚಿ ಮಾರ್ಸೆಲ್ ಡಿ’ಸೋಜ ಉಪಸ್ಥಿತರಿದ್ದರು.

ವಂ.ಡಾ. ರೋಶನ್ ಡಿ’ಸೋಜಾ ಪ್ರಸ್ತುತ ಉಡುಪಿ ಧರ್ಮಪ್ರಾಂತದ ಕುಲಪತಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ರೊಜಾರಿಯೋ ಕಾಥೆಡ್ರಲ್, ಕುಲಶೇಖರ ಮತ್ತು ಮೂಡುಬೆಳ್ಳೆ ಚರ್ಚ್‌ಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಸೈಂಟ್ ಪೀಟರ್ಸ್ ಇನ್‌ಸ್ಟಿಟ್ಯೂಟ್‌ನಿಂದ ‘ಕ್ಯಾನನ್ ಲಾ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಯನ್ನು ಮತ್ತು ರೋಮನ್ ಉರ್ಬಾನಿಯಾನ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಅವರು ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News