×
Ad

ಕರ್ನಾಟಕ ರಾಜ್ಯ ಮೀಸಲು ಪಡೆಯ ಸಿಬ್ಬಂದಿ ಬಶೀರ್ ಚೊಕ್ಕಬೆಟ್ಟುಗೆ ‘ರಿಯಾದ್ ಕ್ಲಬ್’ನ ಸಾಧನ ಸೇವಾ ಪ್ರಶಸ್ತಿ

Update: 2023-07-05 23:02 IST

ಬಶೀರ್ ಚೊಕ್ಕಬೆಟ್ಟು

ಮಂಗಳೂರು : ಕರ್ನಾಟಕ ರಾಜ್ಯ ಮೀಸಲು ಪಡೆಯ ಸಿಬ್ಬಂದಿ ಬಶೀರ್ ಚೊಕ್ಕಬೆಟ್ಟು ಅವರ ಸಮಾಜಸೇವೆಯನ್ನು ಗುರುತಿಸಿ ಗಲ್ಫ್ ರಾಷ್ಟ್ರದ ನೆಲೆಸಿರುವ ಕರಾವಳಿ ಕನ್ನಡಿಗರ ‘ರಿಯಾದ್ ಕ್ಲಬ್’ನ ಸಾಧನ ಸೇವಾ ಪ್ರಶಸ್ತಿಯನ್ನು ನೀಡಲಾಗಿದೆ.

ಕಳೆದ 21 ವರ್ಷಗಳಿಂದ ಮೀಸಲು ಪೊಲೀಸ್ ಪಡೆಯಲ್ಲಿರುವ ಬಶೀರ್ ಚೊಕ್ಕಬೆಟ್ಟು ತನ್ನ ಬಿಡುವಿನ ವೇಳೆಯಲ್ಲಿ ವಿಕಲಚೇತನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News