×
Ad

ಭಟ್ಕಳದಲ್ಲಿ ಬೀದಿನಾಯಿ‌ ದಾಳಿ: ಶಾಲಾ ವಾಹನ ಚಾಲಕ ಸೇರಿ ಮೂವರಿಗೆ ಗಾಯ

Update: 2023-07-08 19:03 IST

ಸಾಂದರ್ಭಿಕ ಚಿತ್ರ

ಭಟ್ಕಳ: ಭಟ್ಕಳದಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಬೀದಿ ನಾಯಿ ದಾಳಿಯಿಂದಾಗಿ ಇಬ್ಬರು ಬಾಲಕರು ಹಾಗೂ ಶಾಲಾ ವಾಹನ ಚಾಲಕ ಸೇರಿದಂತೆ ಮೂವರು ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ನಾಯಿ ದಾಳಿಯಿಂದಾಗಿ ಗಾಯಗೊಂಡವರನ್ನು ಮಖ್ದೂಮ್ ಕಾಲೋನಿಯ ಅಲಿ ಮಲ್ಪಾ (5), ತೆಂಗಿನಗುಂಡಿಯ ಶಾಲಾ ವ್ಯಾನ್ ಚಾಲಕ ಅಬು ಮುಹಮ್ಮದ್ (50) ಮತ್ತು ಡೊಂಗರಪಳ್ಳಿಯ ಬಾಲಕ ಇಬ್ರಾಹಿಂ ಸಿಯಾನ್ ಸಿದ್ದಿ ಬಾಪಾ (6) ಎಂದು ಗುರುತಿಸಲಾಗಿದೆ.

ಈ ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಮಖ್ದೂಮ್ ಕಾಲೋನಿಯ ಡೊಂಗರಪಳ್ಳಿ ಎಂಬಲ್ಲಿ ಮತ್ತೊಂದು ನಾಯಿ ದಾಳಿ ಪ್ರಕರಣ ನಡೆದಿದೆ. ಇಬ್ರಾಹಿಂ ಸಿಯಾನ್ (6) ಎಂಬ ಬಾಲಕ ತನ್ನ ತಂದೆ ಮೂಸಾ ಸಿದ್ದಿ ಬಾಪಾ ಅವರೊಂದಿಗೆ ಮನೆಯ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ನಾಯಿ ಮಗುವಿನ ಮೇಲೆ ದಾಳಿ ಮಾಡಿದೆ. ಆದರೆ ತಂದೆಯು ಬಾಲಕನ ರಕ್ಷಣೆ ಮಾಡಿದ್ದು ಹೆಚ್ಚಿನ ಅನಾಹುತದಿಂದ ತಡೆದಿದ್ದಾರೆ. ಮೂವರಿಗೂ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ರೇಬಿಸ್ ಚುಚ್ಚುಮದ್ದು ನೀಡಲಾಗಿದ್ದು, ಗಾಯಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News