×
Ad

ಸುಳ್ಯ: ಪರವಾನಿಗೆ ಇಲ್ಲದೆ ಜಾನುವಾರು ಸಾಗಾಟ; ಆರೋಪಿ ಸೆರೆ

Update: 2023-07-14 21:11 IST

ಸುಳ್ಯ: ಪರವಾನಗಿ ಇಲ್ಲದೆ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ರತೀಶ್‌ ನಾರಾಯಣನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳ್ಳಾರೆ ಕಡೆಯಿಂದ ಸೋಣಂಗೇರಿ ಮಾರ್ಗವಾಗಿ ಕೇರಳಕ್ಕೆ ಪಿಕಪ್ ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸುಳ್ಯ ಪೊಲೀಸರು ಆರ್ತಾಜೆ ಎಂಬಲ್ಲಿ ವಾಹನವನ್ನು ತಡೆದರು.

ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಜಾನುವಾರುಗಳಿದ್ದವು, ಈ ಬಗ್ಗೆ ವಿಚಾರಿಸಿದಾಗ ಪರವಾನಗಿ ಇಲ್ಲದಿರುವುದು ಕಂಡು ಬಂತು. ಬಳಿಕ ಚಾಲಕ ರತೀಶ್ ಹಾಗು ವಾಹನವನ್ನು ವಶಕ್ಕೆ ಪಡೆದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News