×
Ad

ಸುಳ್ಯ: ತೋಡು ದಾಟುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಕಾರ್ಮಿಕ ನೀರು ಪಾಲು

Update: 2023-07-06 22:03 IST

ಸುಳ್ಯ: ತೋಡು ದಾಟುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ನೀರು ಪಾಲಾದ ಘಟನೆ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ.

ಕೇರಳದ ಬಾಲಕೃಷ್ಣ (47) ಎಂಬವರು ನೀರು ಪಾಲಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಬಾಲಕೃಷ್ಣ ಅವರು ಆಲೆಟ್ಟಿಯ ಡಿಸೋಜಾ ಎಂಬವರ ಎಸ್ಟೇಟ್ ಗೆ ಅಡಿಕೆ ತೋಟದ ಕೆಲಸಕ್ಕೆ ಬಂದಿದ್ದರು. ಗುರುವಾರ ಸಂಜೆ ಕೆಲಸ ಮುಗಿಸಿ ನಾಲ್ಕು ಜನರ ತಂಡ ಹಿಂತಿರುಗುವ ವೇಳೆ ತೋಡು ದಾಟುತ್ತಿದ್ದಾಗ ಬಾಲಕೃಷ್ಣ ಅವರು ಆಯತಪ್ಪಿ ನೀರಿಗೆ ಬಿದ್ದು ನೀರು ಪಾಲಾಗಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೋಡಿನಲ್ಲಿ ನೀರು ಹೆಚ್ಚು ಹಾಗೂ ರಭಸವಾಗಿ ಹರಿಯುತ್ತಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಅಧಿಕಾರಿಗಳು, ಅಗ್ನಿ ಶಾಮಕ ದಳ ಭೇಟಿ ನೀಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News