×
Ad

ಸುರತ್ಕಲ್‌: ಇಸ್ಪೀಟ್ ಆಡುತ್ತಿದ್ದ ಏಳು ಮಂದಿ ಸೆರೆ

Update: 2023-06-30 21:40 IST

ಸುರತ್ಕಲ್‌, ಜೂ. 30: ಇಲ್ಲಿನ ಕಾನದ ಗ್ಲೋರಿಯಾ ಕಾಂಪ್ಲೆಕ್ಸ್ ನ ಮನೆಯೊಂದರಲ್ಲಿ ಇಸ್ಪೀಟ್ ಆಡುತ್ತಿದ್ದ ಏಳು ಮಂದಿಯನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ರಾಕೇಶ್, ಅಭಿಷೇಕ್, ಶರೀಫ್, ಕುಶಾಲಪ್ಪ, ಪ್ರವೀಣ ಆಲಿಯಾಸ್‌ ಆನಂದ, ಅನೀಷ್ ಎಚ್. ಕರ್ಕೇರಾ, ಇಮ್ರಾನ್ ಎಂದು ಪೊಲೀಸರು ಮಾಹಿತಿ ನೀಡಿದ್ದು, ಬಂಧಿತರಿಂದ ಆಟದಲ್ಲಿ ಪಣವಾಗಿಟ್ಟಿದ್ದ 34,150 ರೂ. ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಜೂ.29ರಂದು ತಡರಾತ್ರಿ ಕಾನದ ಗ್ಲೋರಿಯಾ ಕಾಂಪ್ಲೆಕ್ಸ್ ನ ಮನೆಯೊಂದರಲ್ಲಿ ಪರವಾನಿಗೆ ಪಡೆಯದೇ ಇಸ್ಪೀಟು ಆಟಡುತ್ತಿರುವ ಕುರಿತು ಸುರತ್ಕಲ್‌ ಪೊಲೀಸ್‌ ನಿರೀಕ್ಷಕರಿಗೆ ಬಂದ ಖಚಿತ ಮಾಹಿತಿ ಆಧರಿಸಿ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮತ್ತು ಸಿಬ್ಬಂದಿ ದಿಲೀಪ್ ರಾಜೇ ಅರಸ್ ಅವರಿದ್ದ ತಂಡ ದಾಳಿ ಮಾಡಿ ಏಳು ಮಂದಿಯನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News