×
Ad

ಸುರತ್ಕಲ್‌: ಯುವಕ ನಾಪತ್ತೆ

Update: 2023-06-30 21:51 IST

ಸುರತ್ಕಲ್‌, ಜೂ.30: ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರನ್ನು ಹೊಸಬೆಟ್ಟು ಅಭಯ ಮಾರ್ಬಲ್ಸ್ ಎದುರಿನ ಆಚಾರ್ಯ ಕಾಲನಿಯ ಪಂಚರತ್ನ ನಿವಾಸಿ ಶಶೀಂದ್ರ ಶೆಟ್ಟಿಯವರ ಮಗ ಯತೀಶ್‌ ಶೆಟ್ಟಿ (36) ಎಂದು ತಿಳಿದು ಬಂದಿದೆ.

ಶಶೀಂದ್ರ ಶೆಟ್ಟಿ ಮತ್ತು ಅವರ ಪತ್ನಿ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದು, ಆಗ ಮನೆಯಲ್ಲಿದ್ದ ಮಗ ಯತೀಶ್‌ ಶೆಟ್ಟಿ, ಮದುವೆ ಮುಗಿಸಿಕೊಂಡು ಮನೆಗೆ ಹಿಂದಿರುವಾಗ ಮನೆಯಲ್ಲಿರದೇ ನಾಪತ್ತೆಯಾಗಿದ್ದಾನೆ. ಆತನ ಕುರಿತು ಆತ್ನ ಸ್ನೇಹಿತರು, ಸಂಬಂಧಿಗಳಲ್ಲಿ ವಿಚಾರಿಸಿದ್ದು, ಪತ್ತೆಯಾಗಿಲ್ಲ ಎಂದು ಶಶೀಂದ್ರ ಶೆಟ್ಟಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್‌ ಪೊಲೀಸರು, ಯತೀಶ್‌ ಶೆಟ್ಟಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News