×
Ad

ವಿಟ್ಲ: ಅನುಮತಿ ಪಡೆಯದೇ ವ್ಯಾಪಾರ; ಅಂಗಡಿಗೆ ಬೀಗ ಜಡಿದ ಅಧಿಕಾರಿಗಳು

Update: 2023-07-07 22:08 IST

ವಿಟ್ಲ: ವಿಟ್ಲದ ಅಡ್ಡದ ಬೀದಿಯಲ್ಲಿರುವ ಜೆ.ಎಮ್.ಜೆ ಕಾಂಪ್ಲೆಕ್ಸ್‌ ನಲ್ಲಿ ಉದ್ಘಾಟನೆಗೊಂಡಿದ್ದ ಮಾಧವ ರತ್ನ ಬಿಗ್‍ ಬಝಾರ್ ಗೆ ಕೆಲವೇ ಗಂಟೆಯಲ್ಲಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ವಿಟ್ಲದ ಅಡ್ಡದಬೀದಿಯಲ್ಲಿ ಶುಕ್ರವಾರ ಬೆಳಿಗ್ಗೆ ಬಿಗ್‍ ಬಝಾರ್ ಶುಭಾರಂಭಗೊಂಡಿತ್ತು. ಸಂಜೆ ಇಲ್ಲಿಗೆ ಆಗಮಿಸಿದ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಾಲ ನಾಯ್ಕ ಮತ್ತು ಸಿಬ್ಬಂದಿ ಪರಿಶೀಲಿಸಿದ್ದಾರೆ. ಇಲ್ಲಿ ವ್ಯಾಪಾರ ನಡೆಸಲು ಪ.ಪಂ ನಿಂದ ಯಾವುದೇ ಅನುಮತಿ ಪಡೆಯದಿರುವುದು ಗಮನಕ್ಕೆ ಬಂದಿದೆ. ಬಳಿಕ ಅಧಿಕಾರಿಗಳು ಅಂಗಡಿ ಬೀಗ ಜಡಿದಿದ್ದಾರೆ. ಬಿಗ್‌ ಬಝಾರಿನ ಪ್ರಚಾರದ ಬ್ಯಾನರ್ ಅನ್ನು ವಿದ್ಯುತ್ ಟ್ರಾನ್ಸ್ ಫರ್ಮರ್ ಗೆ ಅಳವಡಿಸಿದ್ದು, ನಿಯಮ ಉಲ್ಲಂಘಿಸಿದ್ದಾರೆ ಎಂದು ಅದನ್ನು ಕೂಡಾ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News