×
Ad

ಗಾಳಿಮಳೆಗೆ ಹಳಿಗೆ ಬಿದ್ದ ಮರ: ಕೆಲಕಾಲ ರೈಲು ಸಂಚಾರ ಸ್ಥಗಿತ

Update: 2023-07-04 21:21 IST

ಉಡುಪಿ, ಜು.೪: ಭಾರೀ ಮಳೆಯಿಂದಾಗಿ ರೈಲ್ವೆ ಹಳಿಯ ವಿದ್ಯುತ್ ಕಂಬದ ಮೇಲೆ ಮರವೊಂದು ಬಿದ್ದ ಪರಿಣಾಮ ಸುಮಾರು ಎರಡು ಗಂಟೆಗೂ ಅಧಿಕ ಕಾಲ ರೈಲು ಸ್ಥಗಿತಗೊಂಡ ಘಟನೆ ಬಾರಕೂರು ಸಮೀಪ ಮಂಗಳವಾರ ಸಂಜೆ ವೇಳೆ ನಡೆದಿದೆ.

ಗಾಳಿಯಿಂದ ಬೃಹತ್ ಮರವೊಂದು ರೈಲ್ವೆ ಹಳಿಯ ಮೇಲೆ ಬಿದ್ದಿದ್ದು, ಕೂಡಲೇ ಗಮನಿಸಿದ ಸಿಬ್ಬಂದಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಇದೇ ಮಾರ್ಗದಲ್ಲಿ ದೆಹಲಿ- ಕೇರಳ ನಡುವೆ ಸಂಚರಿಸುವ ನಿಜಾಮುದ್ದೀನ್- ತಿರುವನಂತಪುರ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆ ಸ್ಥಗಿತಗೊಳಿಸಲಾಗಿತ್ತು.

ಸಿಬ್ಬಂದಿಗಳು ಕೂಡಲೇ ಮರವನ್ನು ತೆರವುಗೊಳಿಸಿದ್ದು, ಸುಮಾರು ಎರಡು ಗಂಟೆಗೂ ಅಧಿಕ ಅವಧಿಯ ಬಳಿಕ ರೈಲನ್ನು ಪುನಾರಂಭಿಸಲಾಯಿತು. ಅದೇ ರೀತಿ ಇದೇ ಮಾರ್ಗದಲ್ಲಿ ಉಡುಪಿ ಜಿಲ್ಲೆಯಿಂದ ಸಾಗುವ ಎಲ್ಲಾ ರೈಲುಗಳು ನಿಲ್ದಾಣಗಳಲ್ಲಿ ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News