ಉಡುಪಿ: ಜಿಲ್ಲಾಧಿಕಾರಿ ಕೂರ್ಮಾರಾವ್‌ಗೆ ವರ್ಗಾವಣೆ; ವಿದ್ಯಾಕುಮಾರಿ ನೂತನ ಡಿಸಿ
ಡಾ.ವಿದ್ಯಾಕುಮಾರಿ
ಉಡುಪಿ, ಜು.13: ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರನ್ನು ವರ್ಗಾಯಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ವಿದ್ಯಾಕುಮಾರಿ ಕೆ. ಅವರನ್ನು ನೇಮಕ ಮಾಡಲಾಗಿದೆ.
ಕೆಎಎಸ್ ಅಧಿಕಾರಿಯಾಗಿದ್ದು, 2021ರಲ್ಲಿ ಐಎಎಸ್‌ಗೆ ಬಡ್ತಿ ಪಡೆದಿದ್ದ ಮಂಗಳೂರು ಸಮೀಪದ ಉಳ್ಳಾಲ ಮೂಲದ ವಿದ್ಯಾಕುಮಾರಿ, ಈ ಹಿಂದೆ ಉಡುಪಿಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಅಪರ ಜಿಲ್ಲಾಧಿಕಾರಿ ಯಾಗಿ ಕಾರ್ಯನಿರ್ವಹಿಸಿದ್ದರು. ಎಂ.ಎ ಸ್ನಾತಕೋತ್ತರ ಪದವಿಯೊಂದಿಗೆ ಡಾಕ್ಟರೇಟ್ ಪದವಿಯನ್ನು ಪಡೆದಿರುವ ವಿದ್ಯಾಕುಮಾರಿ, ತುಳು ಹಾಗೂ ಮಲಯಾಳಂ ಭಾಷೆಯನ್ನೂ ಬಲ್ಲವರಾಗಿದ್ದಾರೆ. ತುಮಕೂರು ಜಿಲ್ಲಾ ಪಂಚಾಯತ್‌ನ ಸಿಇಓ ಆಗಿದ್ದ ಅವರನ್ನು ಕಳೆದ ತಿಂಗಳಷ್ಟೇ ಯಾವುದೇ ಹುದ್ದೆ ತೋರಿಸದೇ ವರ್ಗಾಯಿಸಲಾಗಿತ್ತು.
2021ರ ಆಗಸ್ಟ್ ಕೊನೆಯಲ್ಲಿ ಉಡುಪಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಕೂರ್ಮಾ ರಾವ್ ಅವರಿಗೆ ಇದೀಗ ಯಾವುದೇ ಹುದ್ದೆ ಹಾಗೂ ಸ್ಥಳವನ್ನು ತೋರಿಸದೇ ವರ್ಗಾವಣೆ ಮಾಡಲಾಗಿದೆ.