×
Ad

ಮಂಗಳೂರು: ಮಹಿಳೆ ನಾಪತ್ತೆ

Update: 2023-06-26 22:52 IST

ಮಂಗಳೂರು, ಜೂ.26: ಮಂಗಳೂರು ತಾಲೂಕು ಪೊರ್ಕೊಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ರಿಚಾ ಸಿಂಗ್ (29) ಅವರು ಜೂ.21ರಂದು ನಾಪತ್ತೆಯಾಗಿರುವುದಾಗಿ ಆಕೆಯ ಪತಿ ಪಂಕಜ ಕುಮಾರ್ ಗುಪ್ತಾ ಪೊಲೀಸರಿಗೆ ದೂರು ನೀಡಿದ್ದಾರೆ.

ಎಂಆರ್‌ಪಿಎಲ್‌ನಲ್ಲಿ ಉದ್ಯೋಗದಲ್ಲಿರುವ ಪಂಕಜ ಕುಮಾರ್ ಗುಪ್ತಾ ಮತ್ತು ರಿಚಾ ಸಿಂಗ್ ಅವರ ವಿವಾಹ 10 ವರ್ಷಗಳ ಹಿಂದೆ ನಡೆದಿತ್ತು. ಕಳೆದ ಒಂದು ವರ್ಷದಿಂದ ಇವರಲ್ಲಿ ಮನಸ್ತಾಪ ಉಂಟಾಗಿ ಇವರ ನಡುವೆ ಮಾತುಕತೆ ಸರಿಯಾಗಿ ಇರಲಿಲ್ಲ. ರಿಚಾ ಸಿಂಗ್ ಬೈಕಂಪಾಡಿಯ ಪ್ಲಾಸ್ಟಿಕ್ ಕಂಪೆನಿಯಲ್ಲಿ ಕೆಲಸದಲ್ಲಿದ್ದರು. ಆದರೆ ಒಂದು ವಾರದಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರು.

ಜೂ.21ರಂದು ಪಂಕಜ ಕುಮಾರ್ ಗುಪ್ತಾ ಸಂಜೆ ಮನೆಗೆ ಬಂದು ನೋಡಿದಾಗ ರಿಚಾ ಸಿಂಗ್ ಮನೆಯಲ್ಲಿರಲಿಲ್ಲ. ಮನೆಗೆ ಬೀಗ ಹಾಕಲಾಗಿತ್ತು. ಬಳಿಕ ಅವರನ್ನು ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಇವರ ಪತ್ತೆಯಾದಲ್ಲಿ ಬಜ್ಪೆ ಪೊಲೀಸ್ ಠಾಣೆ ದೂರವಾಣಿ 0824-2220531, ಪೊಲೀಸ್ ಕಂಟ್ರೋಲ್ ರೂಂ 0824-2220800, 2220100, 9480802321 ಮಾಹಿತಿ ನೀಡುವಂತೆ ಬಜ್ಪೆ ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News