×
Ad

ಮಹಿಳೆ ಆತ್ಮಹತ್ಯೆ

Update: 2023-07-16 21:17 IST

ಕಾರ್ಕಳ, ಜು.16: ಹಣಕ್ಕಾಗಿ ಸಂಬಂಧಿಯಿಂದ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ತಾನು ಕೆಲಸ ಮಾಡುವ ಸೊಸೈಟಿ ಕಚೇರಿಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಜು.14ರಂದು ಕಾರ್ಕಳದಲ್ಲಿ ನಡೆದಿದೆ.

ಮೃತರನ್ನು ಕಾರ್ಕಳ ಮಾರ್ಕೆಟ್ ರಸ್ತೆಯ ನಿವಾಸಿ ನರೇಶ್ ಎಂಬವರ ಪತ್ನಿ ಪ್ರಮೀಳ(31) ಎಂದು ಗುರುತಿಸಲಾಗಿದೆ.

ಇವರು ಕಾರ್ಕಳ ಮಹಿಳಾ ಕೋ ಅಪರೇಟಿವ್ ಸೊಸೈಟಿಯಲ್ಲಿ ಕಚೇರಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಈಕೆಗೆ ನರೇಶ್ ಅವರ ದೂರದ ಸಂಬಂಧಿ ಹೊಸ್ಮಾರಿನ ಸಂತೋಷ ಯಾನೆ ಹರಿತನಯ ಎಂಬಾತ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.

ಕಳೆದ ನಾಲ್ಕು ತಿಂಗಳುಗಳಿಂದ ತನಗೆ ಸಂತೋಷ್ 3 ಲಕ್ಷ ರೂ. ಹಣ ಕೊಡಬೇಕೆಂದು ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಮೀಳಾ ತನ್ನ ಗೆಳತಿಗೆ ವಾರದ ಹಿಂದೆ ತಿಳಿಸಿದ್ದರು. ಇದೇ ಕಾರಣಕ್ಕೆ ಆಕೆ ಕಛೇರಿಯಲ್ಲಿಯೇ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News