×
Ad

ಯಕ್ಷ ಕಲಾವಿದ ಗಣಪತಿ ಬೈಲಗದ್ದೆ ನಿಧನ

Update: 2023-07-17 20:36 IST

ಉಡುಪಿ, ಜು.17: ಹೊನ್ನಾವರ ತಾಲೂಕಿನ ಬೈಲುಗದ್ದೆಯ ನಿವಾಸಿ ಬಡಗುತಿಟ್ಟಿನ ಯಕ್ಷಗಾನ ಕಲಾವಿದ ಗಣಪತಿ ಬೈಲಗದ್ದೆ (39) ರವಿವಾರ ನಿಧನ ಹೊಂದಿದರು.

ಗುಣವಂತೆಯ ಶ್ರೀಮಯ ಯಕ್ಷಗಾನ ಕಲಾಕೇಂದ್ರದಲ್ಲಿ ಕೆರೆಮನೆ ಶಂಭು ಹೆಗಡೆ ಹಾಗೂ ಹೆರಂಜಾಲು ಗೋಪಾಲ ಗಾಣಿಗರ ಶಿಷ್ಯರಾಗಿದ್ದ ಇವರು ಗುಂಡುಬಾಳ, ಮಡಾಮಕ್ಕಿ, ಪೆರ್ಡೂರು, ಸಾಲಿಗ್ರಾಮ ಹಾಗೂ ಸಿಗಂದೂರು ಮೇಳಗಳಲ್ಲಿ ಎರಡು ದಶಕಗಳ ಕಾಲ ವಿವಿಧ ಪೋಷಕ ಪಾತ್ರಗಳ ನಿರ್ವಹಣೆಯಿಂದ ಕಲಾರಸಿಕರ ಮನಗೆದ್ದಿದ್ದರು.

ಅನಾರೋಗ್ಯದ ಕಾರಣದಿಂದ ಕಳೆದ ವರ್ಷ ಮೇಳದ ತಿರುಗಾಟ ಮಾಡಿರಲಿಲ್ಲ. ಅವಿವಾಹಿತರಾಗಿದ್ದ ಇವರು ತಂದೆ, ತಾಯಿ ಹಾಗೂ ಅಪಾರ ಅಭಿಮಾನಿ ಗಳನ್ನು ಅಗಲಿದ್ದಾರೆ. ಗಣಪತಿ ಬೈಲಗದ್ದೆ ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News