×
Ad

ಯಕ್ಷಗಾನ ಕಲಾವಿದ ಕೃಷ್ಣ ಮುಡಿಪು ನಿಧನ

Update: 2023-07-01 18:42 IST

ಕೊಣಾಜೆ: ಉಳ್ಳಾಲ ತಾಲೂಕಿನ ಮುಡಿಪು ನಿವಾಸಿ, ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಮುಡಿಪು( 78) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸ್ವ ಗೃಹದಲ್ಲಿ ನಿಧನರಾದರು. ಇವರಿಗೆ ಪತ್ನಿ ಹಾಗೂ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಇವರ ಪುತ್ರ ಕುಸುಮಾಕರ ಮುಡಿಪು ಹವ್ಯಾಸಿ ಮದ್ದಲೆಗಾರರಾಗಿದ್ದಾರೆ.

ಸ್ತ್ರೀಪಾತ್ರದ ಮೂಲಕ ಜನಪ್ರಿಯರಾಗಿದ್ದ ಇವರು ವೇಣೂರು ಮೇಳ, ಸುಂಕದಕಟ್ಟೆ ಮೇಳ, ಇರಾ ಮೇಳ, ಕಟೀಲು ಮೇಳ, ಕೂಡ್ಲು ಮೇಳ, ಭಗವತಿ ಮೇಳ, ಬಪ್ಪನಾಡು ಮೇಳಗಳಲ್ಲಿ ತಿರುಗಾಟವನ್ನು ನಡೆಸಿ‌ ಬಳಿಕ ಮೇಳದಿಂದ ನಿವೃತ್ತರಾಗಿದ್ದರು.

ಹಿತವಾದ ನಾಟ್ಯ, ಮಿತವಾದ ಮಾತುಗಾರಿಕೆಯ ಮೂಲಕ ಜನಾಕರ್ಷಣೆಗೆ ಪಾತ್ರವಾಗಿದ್ದ ಇವರ ಸುಭದ್ರೆ, ಚಿತ್ರಾಂಗದೆ, ರೇಣುಕೆ, ಗೌರಿ, ಭ್ರಮರಕುಂತಳೆ ಮೊದಲಾದ ಪಾತ್ರಗಳ ಮೂಲಕ ಕೀರ್ತಿ ಸಂಪನ್ನರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News