×
Ad

ಸಮಸ್ತ ಉಪಾಧ್ಯಕ್ಷ ಯು.ಎಂ. ಅಬ್ದುರಹ್ಮಾನ್ ಮೌಲವಿ ನಿಧನ

Update: 2026-01-12 10:29 IST

ಕಾಸರಗೋಡು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರೂ, ಚಟ್ಟಂಚಾಲ್ ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಜನರಲ್ ಸೆಕ್ರಟರಿಯೂ ಆಗಿದ್ದ ಮೊಗ್ರಾಲ್ ಕಡವತ್ ದಾರುಸ್ಸಲಾಮ್ ನಿವಾಸಿ ಯು.ಎಂ. ಅಬ್ದುರ್ರಹ್ಮಾನ್ ಮೌಲವಿ (86) ನಿಧನರಾದರು. ಕಳೆದ ಒಂದು ವಾರದಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಶನಿವಾರ ಅವರನ್ನು ಸ್ವಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಇಂದು ಬೆಳಿಗ್ಗೆ ಸಮಯ ಸುಮಾರು 9.15ರ ವೇಳೆಗೆ ವಿಧಿವಶರಾದರು.

1939 ನವೆಂಬರ್ 2ರಂದು ಅಬ್ದುಲ್ ಖಾದಿರ್ ಮತ್ತು ಖದೀಜ ದಂಪತಿಯ ಪುತ್ರನಾಗಿ ಜನಿಸಿದರು. ಶಾಲಾ ಶಿಕ್ಷಣದ ನಂತರ 1963–1964 ಅವಧಿಯಲ್ಲಿ ಮೌಲವಿ ಫಾಝಿಲ್ ಬಾಖವಿ ವಿದ್ಯಾಭ್ಯಾಸವನ್ನು ಪಡೆದರು. ಮಂಗಳೂರು ಪರಂಗಿಪೇಟೆ ಜುಮಾ ಮಸ್ಜಿದ್, ಮಂಗಳೂರು ಅಝ್ಹರಿಯ್ಯಾ ಕಾಲೇಜು, ಕರುವಂತುರುತ್ತಿ, ಪಡನ್ನ ಜುಮಾ ಮಸ್ಜಿದ್, ಕೊಂಡೋಟಿ ಪಳಯಂಗಡಿ ಜುಮಾ ಮಸ್ಜಿದ್, ವೆಲ್ಲೂರು ಬಾಖಿಯಾತುಸ್ಸ್ವಾಲಿಹಾತ್ ಮೊದಲಾದ ಸ್ಥಳಗಳಲ್ಲಿ ಧಾರ್ಮಿಕ ಅಧ್ಯಯನ ನಡೆಸಿದರು.

ಮೊಗ್ರಾಲ್ ಅಬ್ದುರಹ್ಮಾನ್ ಮುಸ್ಲಿಯಾರ್, ಕುಟ್ಟಿಪುರಂ ಅಬ್ದುಲ್ ಹಸನ್, ಕೆ. ಅಬ್ದುಲ್ಲ ಮುಸ್ಲಿಯಾರ್, ವೆಳಿಮುಕ್ಕ್ ಕೆ.ಟಿ. ಮುಹಮ್ಮದ್ ಕುಟ್ಟಿ ಮುಸ್ಲಿಯಾರ್, ಚಾಲಿಯಂ ಪಿ. ಅಬ್ದುರಹ್ಮಾನ್ ಮುಸ್ಲಿಯಾರ್, ಎಂ.ಎಂ. ಬಶೀರ್ ಮುಸ್ಲಿಯಾರ್, ಶೈಖ್ ಹಸನ್ ಹಝ್ರತ್, ಅಬೂಬಕ್ಕರ್ ಹಝ್ರತ್, ಕೆ.ಕೆ. ಹಝ್ರತ್, ಮುಸ್ತಫಾ ಆಲಿಂ ಮೊದಲಾದವರು ಪ್ರಮುಖ ಗುರುಗಳಾಗಿದ್ದಾರೆ.

1992ರಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದರು. 1991ರಿಂದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ, ಸಮಸ್ತ ಕಾಸರಗೋಡು ಜಿಲ್ಲಾ ಮುಶಾವರ ಸದಸ್ಯ, ಎಸ್.ವೈ.ಎಸ್ ರಾಜ್ಯ ಕೌನ್ಸಿಲ್ ಸದಸ್ಯ, ಸಮಸ್ತ ಕಾಸರಗೋಡು ಜಿಲ್ಲಾ ಜನರಲ್ ಸೆಕ್ರಟರಿ, ಎಸ್.ಎಂ.ಎಫ್ ಮಂಜೇಶ್ವರಂ ಮಂಡಲ ಅಧ್ಯಕ್ಷ, 1974ರಿಂದ ಸಮಸ್ತ ಕಾಸರಗೋಡು ತಾಲ್ಲೂಕು ಜನರಲ್ ಸೆಕ್ರಟರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

ಪ್ರಸ್ತುತ ಬದಿಯಡ್ಕ ಕಣ್ಣಿಯತ್ ಅಕಾಡೆಮಿ ಅಧ್ಯಕ್ಷ, ಚೆಮ್ಮಾಡ್ ದಾರುಲ್ ಇಸ್ಲಾಮಿಕ್ ಸರ್ವಕಲಾಶಾಲಾ ಸೆನೆಟ್ ಸದಸ್ಯ, ನೀಲೇಶ್ವರಂ ಮರ್ಕಝುದ್ದಅ‌ವಾ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಕುಂಬಳ ಜುಮಾ ಮಸ್ಜಿದ್, ಇಚ್ಚಿಲಂಕೋಡ್ ಜುಮಾ ಮಸ್ಜಿದ್, ಮೊಗ್ರಾಲ್ ಜುಮಾ ಮಸ್ಜಿದ್, ತ್ರಿಕ್ಕರಿಪುರ ಬೀರ್ಚೇರಿ ಜುಮಾ ಮಸ್ಜಿದ್, ಹೊಸಂಗಡಿ ಜುಮಾ ಮಸ್ಜಿದ್, ಕಲನಾಡ್ ಹೈದ್ರೋಸ್ ಜುಮಾ ಮಸ್ಜಿದ್, ವಳ್ವಕ್ಕಾಡ್ ಜುಮಾ ಮಸ್ಜಿದ್ ಮೊದಲಾದ ಸ್ಥಳಗಳಲ್ಲಿ ದರ್ಸ್ ನಡೆಸಿದ್ದರು.

ಪತ್ನಿಯರು: ಸಕಿಯ್ಯ, ಮರ್ಹೂಂ ಮರಿಯಮ್.

ಮಕ್ಕಳು: ಮುಹಮ್ಮದಲಿ ಶಿಹಾಬ್, ಫಳುಲುರ್ರಹ್ಮಾನ್, ನೂರೂಲ್ ಅಮೀನ್, ಅಬ್ದುಲ್ಲ ಇರ್ಫಾನ್, ಶಹೀರಲಿ ಶಿಹಾಬ್ (ಎಲ್ಲರೂ ಗಲ್ಫ್), ಖದೀಜ, ಮರಿಯಂ, ಶಾಹಿನ (ನಾಲ್ಕನೇ ಮೈಲ್), ಮರ್ಹೂಂ ಮುಹಮ್ಮದ್ ಮುಜೀಬ್ ರಹ್ಮಾನ್, ಆಯಿಶತುಶ್ಶಾಹಿದ (ಚೇರೂರು).

ಅಳಿಯಂದಿರು: ಯು.ಕೆ. ಮೊಯ್ದೀನ್ ಕುಟ್ಟಿ ಮೌಲವಿ (ಮೊಗ್ರಾಲ್), ಸಿ.ಎ. ಅಬ್ದುಲ್ ಖಾದರ್ ಹಾಜಿ (ಸೌದಿ), ಇ. ಅಹ್ಮದ್ ಹಾಜಿ (ಚೇರೂರು), ಖಜೀದ (ಆಲಂಪಾಡಿ), ಮಿಸ್‌ರಿಯ್ಯ (ಕೊಡಿಯಮ್ಮ), ಸಫೀನಾ (ತಳಂಗರ), ಮಿಸ್‌ರಿಯ್ಯ (ಪೇರಾಲ್ ಕಣ್ಣೂರು), ಜಾಸಿರಾ (ಮುಟ್ಟತ್ತೊಡಿ), ಜುಮಾನಾ (ಮೊಗ್ರಾಲ್).

ಮೃತರ ದಫನ ಕಾರ್ಯವು ಇಂದು (ಸೋಮವಾರ) ಸಂಜೆ ಐದು ಗಂಟೆಗೆ ಮೊಗ್ರಾಲ್ ಕಡಪ್ಪುರಂ ದೊಡ್ಡ ಜುಮಾ ಮಸ್ಜಿದ್‌ನ ಖಬರ್‌ಸ್ಥಾನದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News