×
Ad

ಕೇರಳವನ್ನು ಯುಡಿಎಫ್ ಮತ್ತು ಬಿಜೆಪಿ‌ ಮತ ರಾಜ್ಯವನ್ನಾಗಿಸಲು ಶ್ರಮಿಸುತ್ತಿವೆ: ಶಾಸಕ ಎಂ.ರಾಜಗೋಪಾಲನ್

Update: 2026-01-01 20:46 IST

ಮಂಜೇಶ್ವರ: ಸಮಸ್ತ ಸುಂದರ ದೇವರ ರಾಜ್ಯವೆಂದು ಹೆಸರು ಪಡೆದ ಕೇರಳವನ್ನು ಯುಡಿಎಫ್ ಮತ್ತು ಬಿಜೆಪಿ ಮತ ರಾಜ್ಯವನ್ನಾಗಿಸಲು ಶ್ರಮಿಸುತ್ತಿವೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ, ಶಾಸಕ ಎಂ ರಾಜಗೋಪಾಲನ್ ತಿಳಿಸಿದ್ದಾರೆ.

ಅವರು ಸಿಪಿಐಎಂ ನೇತಾರ, ರೈತ ಮುಖಂಡರಾಗಿದ್ದ ಬಿ.ಎಂ ರಾಮಯ್ಯ ಶೆಟ್ಟಿ ಅವರ 23ನೇ ಸಂಸ್ಮರಣೆ ದಿನಾಚರಣೆಯನ್ನು ಹೊಸಂಗಡಿಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಿಜೆಪಿ ಆಡಳಿತದ ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ಮತ ಅಲ್ಪಸಂಖ್ಯಾತರ ನಿವಾಸಗಳ ಮೇಲೆ ಬುಲ್ಡೋಸರ್ ಹತ್ತಿಸಿದಾಗ ಅದಕ್ಕೆದುರಾಗಿ ಹೋರಾಟ ನಡೆಸಿದ್ದು ಸಿಪಿಎಂ ಆಗಿದೆ. ಸಿಪಿಎಂ ನ ಪೋಲೀಟ್ ಬ್ಯೂರೋ ಸದಸ್ಯೆ ಬೃಂದಾ ಕಾರಾಟ್ ಅವರ ನೇತೃತ್ವದಲ್ಲಿ ಬುಲ್ಡೋಸರನ್ನು ತಡೆದು ನಿಲ್ಲಿಸಿ ನ್ಯಾಯಾಂಗದ ಮುಖಾಂತರ ಹೋರಾಟಕ್ಕೆ ನೇತೃತ್ವ ನೀಡಿದ್ದಾರೆ. ಈಗ ಬೆಂಗಳೂರು ಫಕೀರ್ ಕಾಲನಿಯಲ್ಲಿ ದಟ್ಟ ದರಿದ್ರರಾದ ಸಾವಿರಾರು ಮಂದಿಯ ಗುಡಿಸಲುಗಳನ್ನು ಅತೀ ಶೀತದ ಸಮಯದಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರನ್ನು ಬೀದಿಗೆ ತಳ್ಳಿ ರಾತ್ರಿಯ ಸಮಯದಲ್ಲಿ ಕಾಂಗ್ರೆಸ್ ಸರಕಾರ ಬುಲ್ಡೋಸರ್ ನೀತಿಯನ್ನು ಜ್ಯಾರಿಗೊಳಿಸಿದ್ದಾರೆ. ಸಿಪಿಎಂ ಪಕ್ಷದ ಜನ ಪ್ರತಿನಿಧಿಗಳು, ಕೇರಳ ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಿದ ನಂತರ ಅದು ದೊಡ್ಡ ವಾರ್ತೆಯಾಯಿತು. ಕೇರಳದ ಮುಖ್ಯಮಂತ್ರಿಯ ಮಧ್ಯಪ್ರವೇಶವನ್ನು ಬಿಜೆಪಿ ಮತ್ತು ಕರ್ನಾಟಕದ ಕಾಂಗ್ರೆಸ್ ಎದುರಿಸಿದಾಗ ಕೇರಳದ ಮುಸ್ಲಿಂ ಲೀಗ್ ಮತ್ತು ಬೆಂಗಳೂರು ಕೆಎಂಸಿಸಿ ಸಹ ಬುಲ್ಡೋಸರ್ನ ಒಟ್ಟಿಗೆ ನಿಂತ ಚಿತ್ರ ಕಾಣುವಂತೆ ಆಯಿತು. ಕೇರಳದ ಪಂಚಾಯತ್ ಚುನಾವಣೆಯಲ್ಲಿ ಕೋಲೀಬಿ ಸಖ್ಯದ ರೀತಿಯಲ್ಲಿ ಬೆಂಗಳೂರಿನ ಈ ವಿಷಯದಲ್ಲಿ ಕೊಳೀಬಿಗಳು ಒಂದಾದನ್ನು ಕಾಣಬಹುದು ಎಂದು ಹೇಳಿದರು.

ಸಭೆಯಲ್ಲಿ ಕೆಆರ್ ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಬೇಬಿ ಶೆಟ್ಟಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಚಿಪ್ಪಾರ್, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು. ತ್ರಿಥಲ ಪಂಚಾಯತ್ ಚುನಾವಣೆಯಲ್ಲಿ ವಿಜಯಗೊಳಿಸಿದವರಿಗೆ ಸನ್ಮಾನಿಸಲಾಯಿತು.

ಬೆಳಗ್ಗೆ ಬಿಎಂ ರಾಮಯ್ಯ ಶೆಟ್ಟಿಯವರ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಕಾಞಂಗಾಡ್ ಮುನಿಸಿಪಾಲಿಟಿ ಚೆಯರ್ಮ್ಯಾನ್ ವಿವಿ ರಮೇಶನ್ ಉದ್ಘಾಟಿಸಿದರು. ಕೆಆರ್ ಜಯಾನಂದ ಮಾತನಾಡಿದರು. ಕೆ ಕಮಲಾಕ್ಷ ಸ್ವಾಗತಿಸಿ‌, ಬಿಎಂ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News