Somwarpet | ಮರ ಬಿದ್ದು ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರು ಮೃತ್ಯು

Update: 2026-07-29 18:51 IST

ಸಾಂದರ್ಭಿಕ ಚಿತ್ರ | PC :  AI

ಮಡಿಕೇರಿ : ಮರ ಬಿದ್ದು ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಬಿಳಿಗೇರಿ ಗ್ರಾಮದ ಟಾಟಾ ಕಾಫಿ ಎಸ್ಟೇಟ್‍ನಲ್ಲಿ ಇಂದು(ಜು.29) ನಡೆದಿದೆ.

ಕಾಫಿ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಏಕಾಏಕಿ ಮರ ಬಿದ್ದ ಪರಿಣಾಮ ಮರದಡಿಯಲ್ಲಿ ಸಿಲುಕಿದ ಮಹಿಳಾ ಕಾರ್ಮಿಕರಾದ ಪರ್ಬಿನ ಖಾತುನ್ (29) ಹಾಗೂ ಅಲಿಮಾನ್ (48) ಮೃತಪಟ್ಟಿದ್ದಾರೆ. ಘಟನೆಯಿಂದ ಗಾಯಗೊಂಡಿರುವ ಇಬ್ಬರು ಮಹಿಳಾ ಕಾರ್ಮಿಕರಾದ ಅಲಿಷಾ ಖಾತುನ್ (35) ಹಾಗೂ ಮಂಗಳ ಸಬ್ಬರ್ (28) ಅವರಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ, ಮಾದಾಪುರ ಉಪಠಾಣೆ, ಸೋಮವಾರಪೇಟೆ ಪಟ್ಟಣ ಠಾಣಾ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News