×
Ad

ಕೊಪ್ಪಳ ಜಿಲ್ಲಾ ಗುತ್ತಿಗೆದಾರ ಸಂಘದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ

Update: 2025-11-12 12:57 IST

ಕೊಪ್ಪಳ: ಕ್ರಷರ್ ಮತ್ತು ಸಿವಿಲ್ ಕಾಮಗಾರಿಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಕೊಪ್ಪಳ ಸಂಸದ ರಾಘವೇಂದ್ರ ಹಿಟ್ನಾಳ್ ಅವರ ಒಡೆತನದ ಸಂಸ್ಥೆಯಾದ ಪ್ರೇರಣಾ ಸಂಸ್ಥೆಯ ಮೂಲಕವೇ ಖರೀದಿಸಬೇಕು ಎಂದು ನಿಯಮ ಹೇರಲಾಗಿದೆ ಎಂದು ಆರೋಪಿಸಿ ಕೊಪ್ಪಳ ಜಿಲ್ಲಾ ಗುತ್ತಿಗೆದಾರ ಸಂಘದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರು ತಮಗೆ ಸೇರಿದ ಟಿಪ್ಪರ್, ಜೆಸಿಬಿ, ರೋಲರ್ ಮತ್ತು ಟ್ರಾಕ್ಟರ್ ನಂತಹ ವಾಹನಗಳನ್ನುರಸ್ತೆಗೆ ಇಳಿಸಿದ್ದರಿಂದ ಕೆಲಕಾಲ ಸಚಾರ ದಟ್ಟಣೆ ಉಂಟಾಗಿತ್ತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News