ಫೆ.24 ರಂದು ಕೊಪ್ಪಳ ಬಂದ್ ಹಿನ್ನಲೆ : ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ
Update: 2025-02-23 21:42 IST
ಸಾಂದರ್ಭಿಕ ಚಿತ್ರ
ಕೊಪ್ಪಳ : ನಾಳೆ (ಸೋಮವಾರ) ನಡೆಯಲಿರುವ ಕೊಪ್ಪಳ ಬಂದ್ ಪ್ರಯುಕ್ತ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕೊಪ್ಪಳ ನಗರದ ಬಳಿ ನಿರ್ಮಾಣವಾಗುತ್ತಿರುವ ಬಿಎಸ್‌ಪಿಎಲ್ ಕಾರ್ಖಾನೆಯ ವಿರುದ್ಧ ಮತ್ತು ಪರಿಸರ ರಕ್ಷಣೆಗಾಗಿ ವಿವಿಧ ಸಂಘಟನೆಗಳು ಸೇರಿ ನಾಳೆ ( ಸೋಮವಾರ) ಪ್ರತಿಭಟನೆ ನಡೆಸುತ್ತಿದ್ದು, ಮಕ್ಕಳ ಹಿತದೃಷ್ಠಿಯಿಂದ ಕೊಪ್ಪಳ ತಾಲೂಕಿನ ಎಲ್ಲಾ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ಘೋಷಿಸಿದ್ದಾರೆ.
ಅಂದು ಉಂಟಾದ ಶೈಕ್ಷಣಿಕ ನಷ್ಟವನ್ನು ಮುಂದಿನ ರಜಾ ದಿನವಾದ ಮಾ.2ರ ಭಾನುವಾರದಂದು ಶಾಲೆಗಳನ್ನು ನಡೆಸಿ, ಶೈಕ್ಷಣಿಕ ನಷ್ಟವನ್ನು ಸರಿಪಡಿಸಿಕೊಳ್ಳುವಂತೆ ಶಾಲೆಗಳಿಗೆ ಸೂಚಿಸಲಾಗಿದೆ.