ಕೃಷಿಕನ ಬದುಕು ಹಸನಾಗಲು ಸಹಕಾರಿ ಸಂಘ ಆದ್ಯತೆ ನೀಡಿ ಶ್ರಮಿಸಬೇಕು: ಅಮ್ಜದ್ ಪಟೇಲ್
ಕೊಪ್ಪಳ: ದೇಶದ ಬೆನ್ನೆಲುಬು ರೈತ ಬೆಳೆದರೆ ದೇಶ ಬೆಳೆಯುತ್ತದೆ ರೈತನ ಕೃಷಿಕನ ಬದುಕು ಹಸನಾಗಲು ಸಹಕಾರಿ ಸಂಘಗಳ ಮೂಲಕ ಸಂಬಂಧಿಸಿದ ಸಹಕಾರಿ ಕ್ಷೇತ್ರದ ಪದಾಧಿಕಾರಿಗಳು ಶ್ರಮಿಸಬೇಕು ರೈತರ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಅವರು ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಬಹದ್ದೂರ್ ಬಂಡಿಯ ವಾರ್ಷಿಕ ಮಹಾಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು ಮುಂದುವರೆದು ಮಾತನಾಡಿ ರೈತರ ಜೀವನ ಹಸಿರಾಗಲು ಸಹಕಾರಿ ಪತ್ತಿನ ಸಂಘದ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ, ರೈತರಿಗೆ ಸಹಕಾರ ನೀಡಿ ಅವರ ಬದುಕು ಹಸನಾಗಿಸಲು ಪ್ರಯತ್ನಿಸಿದರೆ ಸಹಕಾರಿ ಪತ್ತಿನ ಸಂಘ ಕೂಡ ಬೆಳೆಯುತ್ತದೆ ,ಪರಸ್ಪರ ಸಹಕಾರ ಮನೋಭಾವನೆ ಬಳಸಿಕೊಂಡು ಶ್ರಮಿಸಿದರೆ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಪ್ರಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಹನುಮೇಶ್ ಹೊಸಳ್ಳಿ,ಬಹದ್ದೂರ್ ಬಂಡಿ ಗ್ರಾ.ಪಂ ಅಧ್ಯಕ್ಷ ಯೋಗೇಂದ್ರ ಲೇಬಗೆರಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ಸದಸ್ಯ ಚಾಂದ್ ಪಾಷಾ ಕಿಲ್ಲೇದಾರ್, ರಹಿಮಾನ್ ಸಾಬ್ ಹಿರೇಮಸುತಿ,ನಾಗರಾಜ್ ಹೊಸಳ್ಳಿ, ದತ್ತಪ್ಪ ಇಂದ್ರಮ್ಮನ್ನವರ್,ದೇವಪ್ಪ, ಶಿವಪ್ಪ ಗ್ಯಾನಪ್ಪನವರ್, ರಮೇಶ್ ತುಪ್ಪಾದ್, ಹೂವಿನಹಾಳ ರಾಜಪ್ಪ, ಕೊಟ್ಟರ ನಾಯಕ್, ಶೇಖಮ್ಮ ಚೆನ್ನದಾಸರ್, ಶಿವಯ್ಯ ಸ್ವಾಮಿ, ಹಾಟಿ ವಿಕೋಪ ರೆಡ್ಡಿ, ರೆಡ್ಡಾರ್ ಸೋಮಪ್ಪ ವಾಲಿಕಾರ್, ಗಾಳೆಪ್ಪ ಪೂಜಾರ್ ಸೇರಿದಂತೆ ಅಧಿಕಾರಿ ವರ್ಗದವರು, ವ್ಯವಸ್ಥಾಪಕರು, ಗ್ರಾಮ ಪಂಚಾಯಿತಿಯ ಪ್ರತಿನಿಧಿಗಳು,ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರೈತರು ,ಕಾರ್ಮಿಕ ಕೃಷಿಕ ವರ್ಗದ ಪದಾಧಿಕಾರಿಗಳು ಅಲ್ಲದೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.