ಗಂಗಾವತಿ: ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವೈದ್ಯೆಯ ಮೃತದೇಹ ಪತ್ತೆ
Update: 2025-02-20 20:27 IST
ಅನನ್ಯ ಮೋಹನ್ ರಾವ್ (Photo:X)
ಗಂಗಾವತಿ (ಕೊಪ್ಪಳ) : ಸ್ನೇಹಿತರೊಂದಿಗೆ ರಜೆ ಕಳೆಯಲು ಆಗಮಿಸಿ ಈಜಲು ಹೋಗಿ ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋಗಿದ್ದ ಅನನ್ಯ ಮೋಹನ್ ರಾವ್ ಎಂಬ ತೆಲಂಗಾಣದ ಖಾಸಗಿ ಆಸ್ಪತ್ರೆಯ ವೈದ್ಯೆಯ ಮೃತದೇಹ ಇಂದು ( ಗುರುವಾರ) ಪತ್ತೆಯಾಗಿದೆ.
ಹೈದರಾಬಾದ್ನ ನಾಂಪಲ್ಲಿ ಪ್ರದೇಶದ ನಿವಾಸಿ ಅನನ್ಯ ಮೋಹನ್ ರಾವ್ ಎಂಬವರು ರಜೆ ಕಳೆಯಲು ಗಂಗಾವತಿಗೆ ಆಗಮಿಸಿ ನದಿಯಲ್ಲಿ ಈಜುವಾಗ ನೀರಿನ ರಬಸಕ್ಕೆ ಕೊಚ್ಚಿಹೋಗಿದ್ದರು.
16 ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆಯಾಗಿದೆ.
ನಂತರ ನದಿಯ ದಡದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.