×
Ad

ಕೊಪ್ಪಳ: ಸಾಲಬಾಧೆಯಿಂದ ರೈತ ಆತ್ಮಹತ್ಯೆ

Update: 2025-01-23 20:21 IST

ಕೊಪ್ಪಳ/ಕಾರಟಗಿ : ಸಾಲಭಾಧೆ ತಾಳಲಾರದೆ ರೈತನೋರ್ವ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಜರುಗಿದ್ದು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಮಪ್ಪ ಸಣ್ಣ ಈರಪ್ಪ ಮೃತ ರೈತರಾಗಿದ್ದು ಇವರು ಈಳಿಗನೂರು ಗ್ರಾಮ ಸಿಮೆಯ ಸರ್ವೆ ನಂಬರ್ 86*6ರ ಎರಡು ಎಕರೆ 06 ಗುಂಟೆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದರು. ಸದರಿ ಜಮೀನಿನ ಮೇಲೆ 03 ಲಕ್ಷ ರೂಪಾಯಿ ಬೆಳೆ ಸಾಲ ಮತ್ತು 50,000 ಕೈಸಾಲವನ್ನು ಮಾಡಿಕೊಂಡಿದ್ದರು.

ಇತ್ತೀಚಿಗೆ ಭೀಮಪ್ಪ ಸಣ್ಣ ಈರಪ್ಪ ಇವರ ಜಮೀನಿನಲ್ಲಿ ಬೆಳೆದ ಬೆಳೆ ಅಕಾಲಿಕ ಮಳೆ ಸುರಿದ ಕಾರಣ ಭತ್ತ ಸಂಪೂರ್ಣವಾಗಿ ನೆಲಸಮವಾಗಿ ಬಿದ್ದು ಅಧಿಕ ನಷ್ಟ ಉಂಟು ಮಾಡಿತ್ತು. ಈ ವಿಚಾರವಾಗಿ ಮನನೊಂದಿದ್ದರು ಎನ್ನಲಾಗಿದೆ. ಬ್ಯಾಂಕ್ ಸೇರಿದಂತೆ ವಿವಿಧಡೆ ಸಾಲ ಪಡೆದು ಮರುಪಾವತಿ ಮಾಡದೆ ಆಘಾತಕ್ಕೊಳಗಾಗಿ ಜನವರಿ 15ರ ರಾತ್ರಿ ಹೊಲಕ್ಕೆ ತೆರಳಿದ್ದಾಗ ಕೀಟನಾಶಕ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಅವರ ಮಗನಾದ ಗಂಗಾಧರ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News