ಕೊಪ್ಪಳ: ಸಿಡಿಲು ಬಡಿದು ರೈತ ಮೃತ್ಯು
ಕನಕಗಿರಿ: ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಸಿಡಿಲು ಬಡಿದು ರೈತನೋರ್ವ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಯಂಕಪ್ಪ ಜಾಡಿ(45) ಮೃಪಟ್ಟವರು.
ಯಂಕಪ್ಪ ಹೊಲದಲ್ಲಿದ್ದಾಗ ಈ ಘಟನೆ ನಡೆದಿದ್ದು, ಅವರ ಜೊತೆ ಎತ್ತು ಕೂಡಾ ಸಿಡಿಲಿಗೆ ಬಲಿಯಾಗಿದೆ.
ಘಟನೆ ನಡೆದ ಸ್ಥಳಕ್ಕೆ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರು ಭೇಟಿ ನೀಡಿ ಮೃತಪಟ್ಟ ರೈತನ ಪತ್ನಿ ಬಸಮ್ಮ ಯಂಕಪ್ಪ ಜಾಡಿ ಅವರಿಗೆ ಸರ್ಕಾರದ ಸುತ್ತೋಲೆಯ ಪ್ರಕಾರ 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನದ ಆದೇಶ ಪ್ರತಿಯನ್ನು ಸ್ಥಳದಲ್ಲಿಯೇ ವಿತರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತ ಹನುಮೇಶ ನಾಯಕ, ಜಿ.ಪಂ.ಮಾಜಿ ಸದಸ್ಯೆ ಶಾಂತಾ ರಮೇಶ ನಾಯಕ ಅವರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಉಪ ತಹಶೀಲ್ದಾರ್ ಶರಣಪ್ಪ, ಕಂದಾಯ ನಿರೀಕ್ಷಕ ರವಿಕುಮಾರ ಜಿ, ಗ್ರಾಮ ಆಡಳಿತ ಅಧಿಕಾರಿ ಹಾಲೇಶ ಎಸ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಖಾಸಗಿ ಆಪ್ತ ಸಹಾಯಜ ವೆಂಕಟೇಶ ಗೋಡಿನಾಳ, ರೈತ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಇತರರು ಭೇಟಿ ನೀಡಿದರು.