×
Ad

ಗಂಗಾವತಿ | ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಲೆ ಪ್ರಕರಣ: ಪ್ರಮುಖ ಆರೋಪಿ ರವಿ ಸೇರಿ 10 ಮಂದಿಯ ಬಂಧನ: ಎಸ್ ಪಿ ರಾಮ್ ಅರಸಿದ್ದಿ

Update: 2025-10-27 17:25 IST

ಕೊಪ್ಪಳ: ಇತ್ತೀಚಿಗೆ ಗಂಗಾವತಿ ನಗರದಲ್ಲಿ ನಡೆದ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ವೆಂಕಟೇಶನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ರವಿ ಸೇರಿದಂತೆ ಹತ್ತು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ ಅವರು ಹೇಳಿದರು.

ಈ ಕುರಿತು ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ತಿಂಗಳು 8 ರಂದು ಗಂಗಾವತಿ ನಗರದಲ್ಲಿ ವೆಂಕಟೇಶ್ ಜೆ ಎನ್ನುವರ ಕೊಲೆ ನಡೆದಿತ್ತು. ಅದಕ್ಕೆ ಸಂಭಂದಿಸಿದಂತೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಹೇಳಿದರು.

ಈ ಪ್ರಕರಣದ ತನಿಖೆ ನಡೆಸಿ ಇಲ್ಲಿಯವರೆಗೆ ಪ್ರಮುಖ ಆರೋಪಿ ರವಿ ಸೇರಿದಂತೆ ಹತ್ತು ಆರೋಪಿಗಳನ್ನು ಬಂದಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒದಗಿಸಲಾಗಿದೆ ಇನ್ನು ತನಿಖೆ ಮುಂದು ವರೆದಿದೆ ಎಂದು ಹೇಳಿದರು.

ಈ ಬಂಧಿತ ಆರೋಪಿಗಳಲ್ಲಿ ರವಿಯ ಹೆಂಡತಿ ಕೂಡ ಇದ್ದಾಳೆ. ಈ ಕೊಲೆಗೆ ಸಂಚು ರೂಪಿಸಿದ ಸ್ಥಳವನ್ನು ಕೂಡ ನಾವು ಮಹಜರು ಪಡಿಸಿಕೊಳ್ಳುತಿದ್ದೇವೆ, ನಮ್ಮ ಸಿಬ್ಬಂದಿಯ ಸತತ ಹದಿನೈದು ದಿನಗಳ ಪರಿಶ್ರಮದಿಂದ ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಈ ಕೊಲೆಗೆ ವ್ಯಯಕ್ತಿಕ ಹಳೆಯ ಹಣಕಾಸಿನ ಕಾರಣಗಳಿಂದ ಈ ಕೊಲೆ ನಡೆದಿದೆ, ರವಿ ಮತ್ತು ಗಂಗಾಧರ ವಿರುದ್ಧ ಸುಮಾರು ಎಂಟು ವಿವಿಧ ಪ್ರಕರಣಗಳಿವೆ. ಇನ್ನು ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದೆ ಎಂದು ಹೇಳಿದರು.

ಪ್ರಕರಣ ಹಿನ್ನೆಲೆ :

ನಗರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಅಕ್ಟೋಬರ್ 9 ರಂದು ಗಂಗಾವತಿ ನಗರದ ರಾಯಚೂರು ರಸ್ತೆಯ ರಿಲಾಯನ್ಸ್ ಮಾರ್ಟ್ ಹತ್ತಿರ ಬುಧವಾರ ತಡರಾತ್ರಿ ನಡೆದಿತ್ತು,

ಕೆ. ವೆಂಕಟೇಶ ಕೊಲೆಯಾದ ವ್ಯಕ್ತಿ, ತಡರಾತ್ರಿ ಒಂದು ಗಂಟೆ ಸುಮಾರಿಗೆ ಸ್ನೇಹಿತರೊಂದಿಗೆ ಊಟ ಮುಗಿಸಿಕೊಂಡು ಬೈಕಿನಲ್ಲಿ ಗಂಗಾವತಿಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿತ್ತು,

ಬಂಧಿತ ಆರೋಪಿಗಳು:

ವಿಜಯ @ ಮೈಲಾರಿ,ಧನರಾಜ ತಂದೆ ಲಕ್ಷ್ಮಣರಾವ್, ಭರತ @ ಭೀಮ, ಸಲಿಂ, ಕಾರ್ತಿಕ್ , ಮಹ್ಮದ ಅಲ್ತಾಫ್ , ದಾದಾಪೀರ, ಚೈತ್ರಾ ಗಂಡ ರವಿ ಮತ್ತು ಪ್ರಮುಖ ಆರೋಪಿರವಿ ಗಳಾದ ರವಿ ಮತ್ತು ಗಂಗಾಧರ ರನ್ನು ಬಳ್ಳಾರಿನಗರದ ಅನಂತರಪುಂ ರಸ್ತೆಯ ಹೊರವಲಯದಲ್ಲಿ ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News