×
Ad

ಗಂಗಾವತಿ | 18.06 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ ವಶ; 8 ಮಂದಿ ಆರೋಪಿಗಳ ಬಂಧನ

Update: 2025-05-28 19:13 IST
ಬಂಧಿತ ಆರೋಪಿಗಳು

ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗುಸುತ್ತಿದ್ದ 1.8 ಕೆ.ಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್.ಎಲ್ ಅರಸಿದ್ದಿ ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾವತಿಯ ಸರ್ಕಾರಿ ಐಟಿಐ ಕಾಲೇಜಿನ ಬಳಿ ಇರುವ ರಸ್ತೆಯಲ್ಲಿ ಎರಡು ಕಾರುಗಳಲ್ಲಿ ಸುಮಾರು 18.06 ಲಕ್ಷ ರೂ. ಮೌಲ್ಯದ ಹೈಡ್ರೋ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಲಾಗಿತ್ತು. ಆರೋಪಿಗಳು ಗಾಂಜವನ್ನು ಥೈಲ್ಯಾಂಡ್ ನಿಂದ ಅಕ್ರಮವಾಗಿ ಭಾರತಕ್ಕೆ ತರಿಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ಮೂವರು ಕೇರಳ ರಾಜ್ಯದವರಾಗಿದ್ದು, ಒಟ್ಟು ಎಂಟು ಜನರ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳನ್ನು ಸೌಜೇಶ ಕೆ.ಕೆ.(28), ಸಲಿಂ ಪಿ.ಪಿ.(27) , ಬಿ.ದುರ್ಗಾ ಪ್ರಸಾದ್(27), ಬಾದ್‌ ಷಾ(32), ಮದನ್(26), ಸೂರ್ಯ ಪ್ರತಾಪ್ ರೆಡ್ಡಿ(19), ಮುಹಮ್ಮದ್‌ ಹಮೀದ್(22), ಮಣಿಕಂಠ(23) ಎಂದು ಗುರುತಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News