×
Ad

ಎಸ್ಟಿ ಪಟ್ಟಿಗೆ ಅನ್ಯ ಸಮುದಾಯಗಳ ಸೇರ್ಪಡೆ : ವಾಲ್ಮೀಕಿ ನಾಯಕ ಸಮಾಜದಿಂದ ಖಂಡನೆ

Update: 2025-09-25 20:11 IST

ಕಾರಟಗಿ : ಪರಿಶಿಷ್ಟ ಪಂಗಡಕ್ಕೆ ಅನ್ಯ ಸಮುದಾಯದವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿ ಕಾರಟಗಿ ತಾಲೂಕು ವಾಲ್ಮೀಕಿ ಮಹಾಸಭಾ ಗುರುವಾರ ನಗರದ ತಹಶೀಲ್ದಾರರ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಿತು.

ಪ್ರತಿಭಟನಾ ಮೆರವಣಿಗೆ ಪಟ್ಟಣದ ಪುರಸಭೆ ಕಚೇರಿ ಹೊರಗೆ ಆರಂಭವಾಗಿ, ರಾಜ್ಯ ಹೆದ್ದಾರಿ ಮತ್ತು ಕನಕದಾಸ ವೃತ್ತ ಮುಖಾಂತರ ತಹಶೀಲ್ದಾರರ ಕಚೇರಿ ತಲುಪಿತು.

ಸಮಾಜದ ಮುಖಂಡ ಬಿ. ಶಿವರೆಡ್ಡಿ ನಾಯಕ ಮಾತನಾಡಿ, ನಮ್ಮ ವಾಲ್ಮೀಕಿ ಸಮಾಜ ಈಗಾಗಲೇ ಶೇ.7ರಷ್ಟು ಮೀಸಲಾತಿಯನ್ನು ವರ್ಷಗಳ ಹೋರಾಟದ ಮೂಲಕ ಪಡೆಯಲು ಯಶಸ್ವಿಯಾಗಿದೆ. ಪರಿಶಿಷ್ಟ ಪಂಗಡಕ್ಕೆ ಅನ್ಯ ಸಮುದಾಯ ಸೇರಿಸಿದರೆ ನಮ್ಮ ಸಮುದಾಯದ ಹಕ್ಕು ಮೀಸಲಾತಿ ಹಾಳಾಗುತ್ತದೆ. ಈ ಕುರಿತು ಅಗತ್ಯವಿದ್ದರೆ   ಹೋರಾಟದ ಮೂಲಕ ಹಕ್ಕುಗಳನ್ನು ರಕ್ಷಿಸುತ್ತೇವೆ ಎಂದರು.

ನಮ್ಮ ಮೀಸಲಾತಿಯನ್ನು ಅನ್ಯ ಸಮುದಾಯಕ್ಕೆ ನೀಡದಂತೆ ತಕ್ಷಣವೇ ಸೇರ್ಪಡೆ ಕಾರ್ಯಕ್ಕೆ ಅಂತ್ಯ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಘೋರ ಪರಿಣಾಮಗಳು ಬೀರಬಹುದು ಎಂದು ಮುಖಂಡ ನಾಗರಾಜ ಬಿಲ್ಗಾರ್ ಎಚ್ಚರಿಸಿದರು.

ಪ್ರಧಾನ ಕಾರ್ಯದರ್ಶಿ ಸೋಮನಾಥ ಹೆಬ್ಬಡದ ವಕೀಲರು ಮನವಿ ಪತ್ರ ಓದಿ ಮಾತನಾಡಿದರು. ಕೊನೆಯಲ್ಲಿ ಶಿರಸ್ತೇದಾರ ಉಮಾಮಹೇಶ್ವರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಬೂದಿ ಗಿರಿಯಪ್ಪ, ಗೌರವಾಧ್ಯಕ್ಷ ನಾಗನಗೌಡ, ಮಾಜಿ ಅಧ್ಯಕ್ಷ ಗದ್ದೆಪ್ಪ ನಾಯಕ, ಮತ್ತು ಪಾಲಿಕೆ ಸದಸ್ಯರು ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾವಿರಕ್ಕೂ ಹೆಚ್ಚು ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News