ಕನಕಗಿರಿ | ಹುಲ್ಲಿನ ಬಣವೆಗಳು ಬೆಂಕಿಗಾಹುತಿ
Update: 2026-02-01 00:08 IST
ಕನಕಗಿರಿ, ಜ. 31: ತಾಲೂಕಿನ ಹೀರಖೇಡಾ ಗ್ರಾಪಂ ವ್ಯಾಪ್ತಿಯ ನೀರಲೂಟಿ ಗ್ರಾಮದ ರೈತ ಸಣ್ಣ ಹನುಮಂತ ಎಂಬವರ ಹೊಲದಲ್ಲಿದ್ದ ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾದ ಘಟನೆ ಶನಿವಾರ ಸಂಭವಿಸಿದೆ.
ಒಟ್ಟು ನಾಲ್ಕು ಟ್ರ್ಯಾಕ್ಟರ್‌ನಷ್ಟು ಭತ್ತದ ಹುಲ್ಲು ಸುಟ್ಟು ಹೋಗಿದ್ದು, ಅಂದಾಜು ಒಂದು ಲಕ್ಷ ರೂಪಾಯಿ ಮೊತ್ತದಷ್ಟು ಹುಲ್ಲು ನಷ್ಟವಾಗಿದೆ ಎಂದು ರೈತ ಸಣ್ಣ ಹನುಮಂತ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಗಂಗಾವತಿ ಅಗ್ನಿಶಾಮಕ ಠಾಣಾಧಿಕಾರಿ ಎಲ್.ಆರ್.ಪೂಜಾರಿ ಹಾಗೂ ಸಿಬ್ಬಂದಿ ತೆರಳಿ ಬೆಂಕಿಯನ್ನು ನಂದಿಸಿದ್ದಾರೆ. ತಹಶೀಲ್ದಾರ್ ವಿಶ್ವನಾಥ ಮುರುಡಿ, ಕಂದಾಯ ನಿರೀಕ್ಷಕ ಮಂಜುನಾಥ, ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಬೋವಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.